ಕೇಂದ್ರದ ಅಫಿಡವಿಟ್ ಗೆ ತಮಿಳುನಾಡು ವಿರೋಧ; ಅರ್ಜಿ ಹಿಂಪಡೆಯುವಂತೆ ಎಐಎಡಿಎಂಕೆ ಒತ್ತಾಯ

ಕಾವೇರಿ ವಿಚಾರವಾಗಿ ಕರ್ನಾಟಕದ ಪರ ಆಶಾದಾಯಕವಾಗಿರುವ ಕೇಂದ್ರ ಸರ್ಕಾರದ ಅಫಿಡವಿಟ್ ಗೆ ತಮಿಳುನಾಡು ಭಾರಿ ವಿರೋಧ ವ್ಯಕ್ತಪಡಿಸಿದ್ದು, ಈ ಕೂಡಲೇ ಕೇಂದ್ರ ಸರ್ಕಾರ ತನ್ನ ಅಫಿಡವಿಟ್ ಅನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ.
ಎಐಎಡಿಎಂಕೆ ವಕ್ತಾರೆ ಸರಸ್ವತಿ (ಸಂಗ್ರಹ ಚಿತ್ರ)
ಎಐಎಡಿಎಂಕೆ ವಕ್ತಾರೆ ಸರಸ್ವತಿ (ಸಂಗ್ರಹ ಚಿತ್ರ)
Updated on: 

ಚೆನ್ನೈ: ಕಾವೇರಿ ವಿಚಾರವಾಗಿ ಕರ್ನಾಟಕದ ಪರ ಆಶಾದಾಯಕವಾಗಿರುವ ಕೇಂದ್ರ ಸರ್ಕಾರದ ಅಫಿಡವಿಟ್ ಗೆ ತಮಿಳುನಾಡು ಭಾರಿ ವಿರೋಧ ವ್ಯಕ್ತಪಡಿಸಿದ್ದು, ಈ ಕೂಡಲೇ ಕೇಂದ್ರ ಸರ್ಕಾರ  ತನ್ನ ಅಫಿಡವಿಟ್ ಅನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದೆ.

ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆಯೇ ಚೆನ್ನೈನಲ್ಲಿ ಪ್ರತಿಕ್ರಿಯಿಸಿರುವ ಎಐಎಡಿಎಂಕೆ ಪಕ್ಷದ ವಕ್ತಾರೆ ಸರಸ್ವತಿ ಅವರು, ಕೇಂದ್ರ ಸರ್ಕಾರ ದಿಢೀರನೆ ಕರ್ನಾಟಕದ ಪರ ನಿಲುವು ತಳೆದಿರುವುದು  ನಿಜಕ್ಕೂ ಅಚ್ಚರಿಯಾಗಿದೆ. ಭವಿಷ್ಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ವಾಲುತ್ತದೆ ಎಂದು ತಿಳಿದಿದ್ದ ಜಯಲಲಿತಾ ಅವರು ಇದೇ ಕಾರಣಕ್ಕೆ ನೇರವಾಗಿ ಸುಪ್ರೀಂ ಕೋರ್ಟ್ ಗೆ ತೆರಳಿದ್ದರು.  ಕಾವೇರಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಅವರು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿದ್ದರು ಎಂದು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಕೂಡಲೇ ಕೇಂದ್ರ ಸರ್ಕಾರ ತಾನು ಸಲ್ಲಿಸಿರುವ ಅಫಿಡವಿಟ್ ಅನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಸೆ.30ರ ಸುಪ್ರೀಂಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಇಂದು ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ ಸರ್ಕಾರ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ ಎಂದು ಹೇಳಿದೆ. ಈ ಬಗ್ಗೆ  ಇಂದು ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿರುವ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು, ತಪ್ಪು ತಿಳುವಳಿಕೆಯಿಂದಾಗಿ ತಾವು ಮಂಡಳಿ ರಚಿಸುವುದಾಗಿ ತಿಳಿಸಿದ್ದೆವು. ಆದರೆ  ಪ್ರಸ್ತುತ ಕಾವೇರಿ ನಿರ್ವಹಣಾ ಮಂಡಳಿ ಸಾಧ್ಯವಿಲ್ಲ. ಕಾರಣ ಕಾವೇರಿ ನಿರ್ವಹಣಾ ಮಂಡಳಿ ಸಂಸತ್ತಿನ ಜವಾಬ್ದಾರಿಯಾಗಿದ್ದು, ಉಭಯ ಸದನದ ಅನುಮೋದನೆ ಮೇರೆಗೆ ಮಂಡಳಿ  ರಚಿಸಬೇಕಿದೆ ಎಂದು ರೋಹ್ಟಗಿ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com