ಜಮ್ಮುವಿನಲ್ಲಿ ಮತ್ತೆ ಉಗ್ರರ ದಾಳಿ: 1 ಪೊಲೀಸ್ ಸಾವು, 2 ಗಾಯ

ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ ಮಾಡಿದ್ದು, ದಾಳಿ ವೇಳೆ ಓರ್ವ ಪೇದೆ ಸಾವನ್ನಪ್ಪಿ, ಮತ್ತೊರ್ವ ಪೇದೆ ಹಾಗೂ ನಾಗರೀಕರೊಬ್ಬರು ಗಾಯಗೊಂಡಿರುವ ಘಟನೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜಮ್ಮು: ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಉಗ್ರರು ದಾಳಿ ಮಾಡಿದ್ದು, ದಾಳಿ ವೇಳೆ ಓರ್ವ ಪೇದೆ ಸಾವನ್ನಪ್ಪಿ, ಮತ್ತೊರ್ವ ಪೇದೆ ಹಾಗೂ ನಾಗರೀಕರೊಬ್ಬರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಶೋಪಿಯಾನ್ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಭದ್ರತೆ ನೀಡುತ್ತಿದ್ದ ಸಿಬ್ಬಂದಿಗಳ ಮೇಲೆ ಉಗ್ರರು ನಿನ್ನೆ ರಾತ್ರಿ ಏಕಾಏಕಿ ದಾಳಿ ಮಾಡಿದ್ದಾರೆ. ಪರಿಣಾಮ ನಜೀರ್ ಅಹ್ಮದ್ ಎಂಬ ಪೇದೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬ ಪೇದೆ ಝಹೂರ್ ಅಹ್ಮದ್ ಹಾಗೂ ಓರ್ವ ಸ್ಥಳೀಯ ನಾಗರೀಕರೊಬ್ಬರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಯಗೊಂಡ ಪೇದೆಯನ್ನು ಸೇನಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತಪ್ಪಿಸಿಕೊಂಡಿರುವ ಉಗ್ರರನ್ನು ಸದೆಬಡಿಯಲು ಯೋಧರು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com