

ಯಾನ್ಗೋನ್: ಮ್ಯಾನ್ಮಾರ್ ನ ರಾಖಿನೆ ರಾಜ್ಯದಲ್ಲಿ ಭದ್ರತಾ ಸಿಬ್ಬಂದಿಗಳು ಹಾಗೂ ಶಸ್ತ್ರಾಸ್ತ್ರಧಾರಿಗಳ ನಡುವೆ ಘರ್ಷಣೆಯುಂಟಾಗಿದ್ದು, ಪರಿಣಾಮ 12 ಮಂದಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಮೌಂಗ್ದಾವ್ ಟೌನ್ ಶಿಪ್ ಬಳಿಯ ಪ್ಯಾಂಗ್ಪಿಟ್ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನರು ಶಸ್ತ್ರಾಸ್ತ್ರಗಳನ್ನು ಹಿಡಿದು ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ಯೋಧರು ಸೇರಿದಂತೆ ಹಲವು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
7 ಮಂದಿಯ ಮೃತದೇಹಗಳು ಟೌಂಗ್ ಪ್ಯಾಂಗ್ನ್ಯಾರ್ ಗ್ರಾಮದ ಬಳಿ ದೊರಕಿದ್ದು, ಮೃತ ದೇಹಗಳ ಮೇಲೆ ಕತ್ತಿಗಳು ಪತ್ತೆಯಾಗಿವೆ ಎಂದು ವರದಿಗಳು ತಿಳಿಸಿವೆ.