ವಿಶ್ವದ ಅತ್ಯಂತ ಕಠಿಣ ಯುದ್ಧ ಕೌಶಲ್ಯ ಪ್ರದರ್ಶನದಲ್ಲಿ ಭಾರತೀಯ ಸೇನೆ ತಂಡಕ್ಕೆ ಚಿನ್ನದ ಪದಕ

ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್ ವಿಭಾಗ ಬ್ರಿಟಿಷ್ ಸೇನೆ ಆಯೋಜಿಸಿದ್ದ ವಿಶ್ವದ ಅತ್ಯಂತ ಯುದ್ಧ ಕೌಶಲ್ಯ ಪ್ರದರ್ಶನ ಕಾರ್ಯಾಚರಣೆಯಲ್ಲಿ ಸ್ವರ್ಣ ಪದಕ ಗೆದ್ದಿದೆ.
ವಿಶ್ವದ ಅತ್ಯಂತ ಕಠಿಣ ಯುದ್ಧ ಕೌಶಲ್ಯ ಪ್ರದರ್ಶನದಲ್ಲಿ ಭಾರತೀಯ ಸೇನೆಗೆ ಚಿನ್ನದ ಪದಕ
ವಿಶ್ವದ ಅತ್ಯಂತ ಕಠಿಣ ಯುದ್ಧ ಕೌಶಲ್ಯ ಪ್ರದರ್ಶನದಲ್ಲಿ ಭಾರತೀಯ ಸೇನೆಗೆ ಚಿನ್ನದ ಪದಕ
Updated on: 

ನವದೆಹಲಿ: ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್ ವಿಭಾಗ ಬ್ರಿಟಿಷ್ ಸೇನೆ ಆಯೋಜಿಸಿದ್ದ ವಿಶ್ವದ ಅತ್ಯಂತ ಯುದ್ಧ ಕೌಶಲ್ಯ ಪ್ರದರ್ಶನ ಕಾರ್ಯಾಚರಣೆಯಲ್ಲಿ  ಸ್ವರ್ಣ ಪದಕ ಗೆದ್ದಿದೆ.
ವಾರ್ಷಿಕವಾಗಿ ನಡೆಸಲಾಗುವ ಅಂತಾರಾಷ್ಟ್ರೀಯ ಮಟ್ಟದ ಸೇನಾ ಗಸ್ತು ಕವಾಯತು ಕ್ಯಾಂಬ್ರಿಯನ್ ಪ್ಯಾಟ್ರೋಲ್ ನ್ನು ಬ್ರಿಟಿಷ್ ಸೇನೆ ಆಯೋಜಿಸಿತ್ತು. ವಿಶ್ವದ ಅತ್ಯಂತ ಕಠಿಣ ಸಮರಾಭ್ಯಾಸ ಅಥವಾ ಗಸ್ತು ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಗೋರ್ಖಾ ರೈಫಲ್ಸ್ ವಿಭಾಗದ 2/8 ತಂಡ ಭಾಗವಹಿಸಿ ಸ್ವರ್ಣ ಪದಕ ಪಡೆದಿದೆ.
ಭಾರತೀಯ ಸೇನೆಯ 8 ನೇ ಗೋರ್ಖಾ ರೈಫಲ್ಸ್ ನ 2 ನೇ ಬೆಟಾಲಿಯನ್ ನ 8 ಯೋಧರು ಸ್ವರ್ಣ ಪದಕ ಪಡೆದಿದ್ದು ಭಾರತೀಯ ಸೇನೆಗೆ ಸ್ವರ್ಣ ಪದಕ ನೀಡುತ್ತಿರುವ ವಿಡಿಯೋವನ್ನು ಬ್ರಿಟಿಷ್ ಸೇನೆ ಟ್ವೀಟ್ ಮಾಡಿದೆ.  ವೇಲ್ಸ್ ನ ಕ್ಯಾಂಬ್ರಿಯನ್ ಪರ್ವತ ಶ್ರೇಣಿಗಳಲ್ಲಿ ವಾರ್ಷಿಕವಾಗಿ ನಡೆಸಲಾಗುವ ಅಂತಾರಾಷ್ಟ್ರೀಯ ಸೇನಾ ಕವಾಯತನ್ನು ವಿಶ್ವದ ಅತ್ಯಂತ ಕಠಿಣ ಸೇನಾ ಪರೀಕ್ಷೆ ಎಂದೇ ಪರಿಗಣಿಸಲಾಗಿದೆ. 55 ಕಿಮಿ ಉದ್ದದ ದುರ್ಗಮ ಹಾದಿಯಲ್ಲಿ ನಡೆಸಲಾಗುವ ಕ್ಯಾಂಬ್ರಿಯನ್ ಪ್ಯಾಟ್ರೋಲ್ ನಲ್ಲಿ ಸೈನಿಕರಿಗೆ ನೀಡಲಾಗುವ ಕಾರ್ಯವನ್ನು ಮುಕ್ತಾಯಗೊಳಿಸಿ ಯುದ್ಧ ಕೌಶಲ್ಯವನ್ನು ಪ್ರದರ್ಶಿಸಲು 48 ಗಂಟೆಗಳ ಕಾಲಮಿತಿ ವಿಧಿಸಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com