

ಮುಂಬಯಿ: ನವೆಂಬರ್ ತಿಂಗಳಲ್ಲಿ ಅನೇಕ ಸೆಲಬ್ರಿಟಿಗಳ ಹಾಗೂ ವಿಐಪಿ ಗಳ ಮಕ್ಕಳ ವಿವಾಹ ಕಾರ್ಯಕ್ರಮ ನೆರವೇರಲಿದೆ. ಭಾರತದ ಅತಿ ಶ್ರೀಮಂತ ಉದ್ಯಮಿ ಅನಿಲ್ ಅಂಬಾನಿ ಪುತ್ರಿ ಇಶಾ ಅಂಬಾನಿ ನವೆಂಬರ್ ನಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ಲಂಡನ್ ನ ಯಾಲೆ ವಿಶ್ವ ವಿದ್ಯಾನಿಲಯದಲ್ಲಿ ಇಶಾ ಸೈಕಾಲಜಿ ವ್ಯಾಸಂಗ ಮಾಡಿದ್ದಾರೆ, ಇಶಾ ತನ್ನ ಸಹಪಾಠಿಯನ್ನು ವರಿಸಲಿದ್ದಾರೆ ಎನ್ನಲಾಗಿದೆ, ಆದರೆ ಆತ ಭಾರತೀಯನಲ್ಲ ಕೂಡ ಎಂದು ಹೇಳಲಾಗುತ್ತಿದೆ. ಇನ್ನೂ ಅದ್ಧೂರಿ ವಿವಾಹಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಬಾಲಿವುಡ್ ಕಿಂಗ್ ಖಾನ್ ಶಾರೂಖ್ ವಿವಾಹ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಶಾರೂಖ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಲಿದ್ದಾರೆ. ದೇಶ ವಿದೇಶಗಳಿಂದ ಆಗಮಿಸುವ ಗಣ್ಯರು ನವ ದಂಪತಿಯನ್ನು ಹರಸಲಿದ್ದಾರೆ. ಆದರೆ ವರ ಯಾರು, ಏನು ಎಂಬುದರ ಬಗ್ಗೆ ಅಂಬಾನಿ ಕುಟುಂಬ ಎಲ್ಲಿಯೂ ಯಾವುದೇ ವಿಷಯವನ್ನು ಬಹಿರಂಗ ಪಡಿಸಿಲ್ಲ.