ಸಮಾಜವಾದಿ ಪಕ್ಷ ಬಿಕ್ಕಟ್ಟು: ಶಿವಪಾಲ್ ಸೇರಿ ನಾಲ್ವರು ಸಂಪುಟ ಸೇರ್ಪಡೆ ಸಾಧ್ಯತೆ

ಸಮಾಜವಾದಿ ಪಕ್ಷದ ಉನ್ನತ ಮಟ್ಟದ ಸಭೆ ಬಳಿಕವೂ ಮುಂದುವರೆದಿದ್ದ ಭಿನ್ನಮತ ಇದೀಗ ಶಮನಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಎಸ್ ಪಿ ಕಚೇರಿಯಲ್ಲಿ ನಡೆದ ಸಂಧಾನಸಭೆ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಮುಲಾಯಂ  ಹಾಗೂ ಅಖಿಲೇಶ್ ಯಾದವ್ (ಸಂಗ್ರಹ ಚಿತ್ರ)
ಮುಲಾಯಂ ಹಾಗೂ ಅಖಿಲೇಶ್ ಯಾದವ್ (ಸಂಗ್ರಹ ಚಿತ್ರ)
Updated on: 

ಲಖನೌ: ಸಮಾಜವಾದಿ ಪಕ್ಷದ ಉನ್ನತ ಮಟ್ಟದ ಸಭೆ ಬಳಿಕವೂ ಮುಂದುವರೆದಿದ್ದ ಭಿನ್ನಮತ ಇದೀಗ ಶಮನಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಎಸ್ ಪಿ ಕಚೇರಿಯಲ್ಲಿ ನಡೆದ  ಸಂಧಾನಸಭೆ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಭಿನ್ನಮತದಿಂದಾಗಿ ತಮ್ಮ ಚಿಕ್ಕಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದ ಅಖಿಲೇಶ್ ಯಾದವ್ ಅವರು ಇದೀಗ ಮತ್ತೆ  ಶಿವಪಾಲ್ ಯಾದವ್ ಸೇರಿದಂತೆ ಅವರ ನಾಲ್ಕು ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ನಿನ್ನೆ ಪಕ್ಷದ ರಾಷ್ಟ್ರಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರ ಎದುರೇ ಪರಸ್ಪರ ವಾಗ್ವಾದ ನಡೆಸಿದ್ದ ಅಖಿಲೇಶ್ ಹಾಗೂ ಶಿವಪಾಲ್ ಯಾದವ್ ಅವರು ಇಂದು ಎಸ್ ಪಿ ಕಚೇರಿ ಹಾಗೂ  ಮನೆಯಲ್ಲಿ ನಡೆದ ಸಂಧಾನಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಉಭಯ ಗುಂಪು ಒಂದಷ್ಟು ಬೇಡಿಕೆ ಇಟ್ಟಿದ್ದು ಪರಸ್ಪರ ಒಪ್ಪಂದದ ಮೇರೆಗೆ  ಭಿನ್ನಮತ ಶಮನಗೊಳಿಸಲು ನಿರ್ಧರಿಸಿದ್ದಾರೆ  ಎಂದು ಹೇಳಲಾಗುತ್ತಿದೆ.

ಬಳಿಕ ಸ್ವತಃ ಮುಲಾಯಂ ಸಿಂಗ್ ಯಾದವ್ ಅವರೇ ಉಭಯ ನಾಯಕರಿಗೆ ಕರೆ ಮಾಡಿ ಮನೆಯಲ್ಲೇ ಸಂಧಾನ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸಂಧಾನಸಭೆ ಮನೆಗೆ ಶಿಫ್ಟ್  ಆಯಿತು. ಅಲ್ಲಿಯೂ ಕೂಡ ಸಾಕಷ್ಟು ಚರ್ಚೆಗಳ ಬಳಿಕ ಅಖಿಲೇಶ್ ಹಾಗೂ ಶಿವಪಾಲ್ ಮುಲಾಯಂ ಅವರ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಮುಲಾಯಂ ಸಿಂಗ್ ಯಾದವ್ ಅವರ ಮಾತಿಗೆ ಬೆಲೆ ನೀಡಿ ಭಿನ್ನಮತ ಶಮನಕ್ಕೆ ಉಭಯ ನಾಯಕರು ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಮುಲಾಯಂ ಅವರ  ಮಾತಿನಂತೆಯೇ ಚಿಕ್ಕಪ್ಪ ಶಿವಪಾಲ್ ಯಾದವ್ ಸೇರಿದಂತೆ ಈ ಹಿಂದೆ ಪದಚ್ಯುತಗೊಂಡಿದ್ದ ನಾಲ್ಕು ಮಂದಿ ಸಚಿವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲು ಅಖಿಲೇಶ್ ಒಪ್ಪಿದ್ದಾರೆ ಎಂದು  ತಿಳಿದುಬಂದಿದೆ. ಪ್ರಮುಖವಾಗಿ ಶಿವಪಾಲ್ ಯಾದವ್ ಅವರ ಬೆಂಬಲಿಗರಾದ ಶಾದಾಬ್ ಫಾತಿಮಾ, ನಾರಾದ್ ರಾಯ್ ಹಾಗೂ ಒಪಿ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಾಗಿ  ಅಖಿಲೇಶ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com