ಸರ್ಕಾರದ ವೈಫಲ್ಯ ಮರೆಮಾಚಲು ಎಸ್'ಪಿಯಿಂದ ಒಡಕು ನಾಟಕ: ಬಿಜೆಪಿ

ಸರ್ಕಾರ ನಡೆಸುವಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ವಿಫಲವಾಗಿದ್ದು, ತನ್ನ ವೈಫಲ್ಯವನ್ನು ಮರೆಮಾಚುವ ಸಲುವಾಗಿ ಸಮಾಜವಾದಿ ಪಕ್ಷ ಒಡಕಿನ ನಾಟಕವನ್ನು ಆಡುತ್ತಿದೆ...
ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ
ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ
Updated on: 

ನವದೆಹಲಿ: ಸರ್ಕಾರ ನಡೆಸುವಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ವಿಫಲವಾಗಿದ್ದು, ತನ್ನ ವೈಫಲ್ಯವನ್ನು ಮರೆಮಾಚುವ ಸಲುವಾಗಿ ಸಮಾಜವಾದಿ ಪಕ್ಷ ಒಡಕಿನ ನಾಟಕವನ್ನು ಆಡುತ್ತಿದೆ ಎಂದು ಬಿಜೆಪಿ ಗುರುವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಅವರು, ಕಳೆದ ಹಲವು ದಿನಗಳಿಂದಲೂ ಸಮಾಜವಾದಿ ಪಕ್ಷದಲ್ಲಿ ಸಾಕಷ್ಟು ನಾಟಕೀಯ ಬೆಳವಣಿಗೆಗಳನ್ನು ನೋಡುತ್ತಿದ್ದೇವೆ. ಇದೊಂದು ರೂಪಿಸಲಾಗಿರುವ ನಾಟಕವಾಗಿದೆ. ಸರ್ಕಾರ ನಡೆಸುವಲ್ಲಿ ಅಖಿಲೇಶ್ ಯಾದವ್ ಅವರು ವಿಫಲವಾಗಿದ್ದು, ಸರ್ಕಾರದ ವೈಫಲ್ಯವನ್ನು ಮರೆಮಾಚಲು ಹಾಗೂ ಜನರ ಗಮನವನ್ನು ಬೇರೆಡೆ ಸೆಳೆಯಲು ಸಮಾಜವಾದಿ ಪಕ್ಷ ಈ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಿದ್ದಾರೆ.

ಎಸ್ ಪಿ ಹಾಗೂ ಬಿಎಸ್ ಪಿ ಪಕ್ಷಗಳು ಸಂಬಂಧಗಳನ್ನು ಮುಂದೆ ತಂದು ತಮ್ಮ ತಮ್ಮಲ್ಲಿರುವ ಭ್ರಷ್ಟಾಚಾರಗಳನ್ನು ಬದಿಗೊತ್ತುತ್ತಿದೆ. ಉತ್ತರಪ್ರದೇಶದಲ್ಲಿರುವ ಜನರ ಆರೋಗ್ಯವನ್ನು ಕಾಪಾಡುವಲ್ಲಿ ಇಲ್ಲಿನ ಸರ್ಕಾರ ವಿಫಲವಾಗಿದೆ. ಆದರೆ, ಯಾದವ್ ಅವರ ಆಸ್ತಿ ಮಾತ್ರ ಸಮೃದ್ಧಿಯನ್ನು ಕಾಣುತ್ತಿದೆ. ಮೊದಲು ಕಾಂಗ್ರೆಸ್ ಕುಟುಂಬ ನಂತರ ಮಾಯಾವತಿ ಹಾಗೂ ಅವರ ಸಂಬಂಧಿಕರು ಉತ್ತರಪ್ರದೇಶದಲ್ಲಿ ಅಭಿವೃದ್ಧಿ ಕಾಣುತ್ತಿದ್ದಾರೆ.

ರಾಜ್ಯದಲ್ಲಿ 2,905 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇನ್ನೂ ರಾಜ್ಯದಲ್ಲಿ 1,288 ಆರೋಗ್ಯ ಕೇಂದ್ರಗಳ ಅಗತ್ಯವಿದೆ. 3,092 ತಜ್ಞ ವೈದ್ಯರ ಅಗತ್ಯವಿದೆ. ಆದರೆ, ರಾಜ್ಯದಲ್ಲಿರುವುದು ಕೇವಲ 484 ತಜ್ಞ ವೈದ್ಯರು ಮಾತ್ರ. ಮುಖ್ಯಮಂತ್ರಿಗಳಿಗೆ ಸ್ವಲ್ಪವಾದರೂ ನೈತಿಕತೆ ಎಂಬುದು ಇದೆ ಎಂದಾದರೆ ಮೊದಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲಿ. ಉತ್ತರಪ್ರದೇಶ ಜನತೆಗೆ ಶಿಕ್ಷಣ, ಆರೋಗ್ಯ ಹಾಗೂ ಇನ್ನಿತರೆ ವ್ಯವಸ್ಥೆಗಳನ್ನು ಕಲ್ಪಿಸುವ ಬಿಜೆಪಿಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಜನತೆ ಮೊದಲು ಅಖಿಲೇಶ್ ಅವರ ಸರ್ಕಾರವನ್ನು ತಿರಸ್ಕರಿಸಬೇಕಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com