ಜಮ್ಮುವಿನಲ್ಲಿ ಪಾಕಿಸ್ತಾನ ಸೇನೆಯಿಂದ ಭಾರಿ ಶೆಲ್ ದಾಳಿ

ಶನಿವಾರ ಬೆಳಗ್ಗೆ 6 ಗಂಟೆಯಿಂದ ಪಾಕಿಸ್ತಾನ ಸೇನೆ ಭಾರಿ ಶಸ್ತ್ರಾಸ್ತ್ರಗಳಿಂದ ಗಡಿ ರ7ಣಾ ಪಡೆ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: ಶನಿವಾರ ಬೆಳಗ್ಗೆ 6 ಗಂಟೆಯಿಂದ ಪಾಕಿಸ್ತಾನ ಸೇನೆ ಭಾರಿ ಶಸ್ತ್ರಾಸ್ತ್ರಗಳಿಂದ ಗಡಿ ರಕ್ಷಣಾ ಪಡೆ ಯೋಧರು ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದೆ.

ಜಮ್ಮುವಿನ ಹೀರಾನಗರ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಪಾಕಿಸ್ತಾನ ಸೇನೆ ಭಾರಿ ಪ್ರಮಾಣದ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರು ಪ್ರತ್ಯುತ್ತರ ನೀಡುತ್ತಿದ್ದಾರೆ. ಎರಡು ಕಡೆಯಿಂದ ಬಾಂಬ್ ಗುಂಡಿನ ಚಕಮಕಿ ಹಾಗೂ ಶೆಲ್ ದಾಳಿ ಮುಂದುವರಿದಿದೆ.

ಶುಕ್ರವಾರ ಕೂಡ ಜಮ್ಮುವಿನ ಸಾಂಬಾ , ಕುತುವಾ, ಜಿಲ್ಲೆಗಳ ಗಡಿ ನಿಯಂತ್ರಣ ರೇಖೆ ಬಲಿ ತೀವ್ರವಾದ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಒಬ್ಬ ಉಗ್ರ ಹಾಗೂ ಒಬ್ಬ ಭಾರತೀಯ ಯೋಧ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com