ಎನ್ಎಸ್ ಜಿ ಸದಸ್ಯತ್ವ: ಚೀನಾದೊಂದಿಗೆ ಭಾರತದ ಮಾತುಕತೆ

ಪರಮಾಣು ಸರಬರಾಜು ಗುಂಪು (ಎನ್ ಎಸ್ ಜಿ) ಸದಸ್ಯತ್ವ ವಿಚಾರವಾಗಿ ಭಾರತ ಚೀನಾದೊಂದಿಗೆ ಮಾತುಕತೆ ಮುಂದುವರೆಸಿದೆ.
ಎನ್ಎಸ್ ಜಿ ಸದಸ್ಯತ್ವ: ಚೀನಾದೊಂದಿಗೆ ಭಾರತದ ಮಾತುಕತೆ
ಎನ್ಎಸ್ ಜಿ ಸದಸ್ಯತ್ವ: ಚೀನಾದೊಂದಿಗೆ ಭಾರತದ ಮಾತುಕತೆ
Updated on

ನವದೆಹಲಿ: ಪರಮಾಣು ಸರಬರಾಜು ಗುಂಪು (ಎನ್ ಎಸ್ ಜಿ) ಸದಸ್ಯತ್ವ ವಿಚಾರವಾಗಿ ಭಾರತ ಚೀನಾದೊಂದಿಗೆ ಮಾತುಕತೆ ಮುಂದುವರೆಸಿದೆ.

ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ( ನಿಶಸ್ತ್ರೀಕರಣ ಹಾಗೂ ಅಂತಾರಾಷ್ಟ್ರೀಯ ಭದ್ರತೆ) ಅಮಂದೀಪ್ ಸಿಂಗ್ ಗಿಲ್ ಚೀನಾದ ವಿದೇಶಾಂಗ ಇಲಾಖೆ ಅಧಿಕಾರಿ ವಾಂಗ್ ಕುನ್ ಅವರೊಂದಿಗೆ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಎನ್ ಎಸ್ ಜಿ ಸದಸ್ಯತ್ವ ವಿಚಾರದಲ್ಲಿ ಚೀನಾವನ್ನು ವಾಂಗ್ ಪ್ರತಿನಿಧಿಸುತ್ತಿದ್ದಾರೆ. ಈಗಾಗಲೇ ಚೀನಾ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಅಡ್ಡಿ ಉಂಟು ಮಾಡಿದೆ ಈ ಹಿನ್ನೆಲೆಯಲ್ಲಿ ಭಾರತ ಎನ್ಎಸ್ ಜಿ ಸದಸ್ಯತ್ವ ಪಡೆಯಲು ಚೀನಾದೊಂದಿಗೆ ಭಾರತ ಮತ್ತೊಮ್ಮೆ ಮಾತುಕತೆಗೆ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com