ಈ ಸಂದರ್ಭದಲ್ಲಿ ಅವರ ಮೊದಲಿನ ಆರ್ ಬಿಐ ಗವರ್ನರ್ ಡಿ.ಸುಬ್ಬಾರಾವ್ ಅವರ ಮಾತುಗಳನ್ನು ರಾಜನ್ ನೆನಪಿಸಿಕೊಂಡರು. ರಿಸರ್ವ್ ಬ್ಯಾಂಕಿಗೆ ಕಾರ್ಯಚಟುವಟಿಕೆಗಳ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಮುಖ್ಯ ಎಂದು ಹೇಳಿದರು. ಈ ನಿಟ್ಟಿನಲ್ಲಿ ಬಜೆಟ್, ಅನುಮತಿ, ಸಕ್ರಮ ಮತ್ತು ಮೇಲ್ವಿಚಾರಣೆ ಮೊದಲಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಆರ್ ಬಿಐಗೆ ಇರಬೇಕು ಎಂದರು.