ದೇಶದ ಜನತೆಗೆ ಗಣೇಶ ಹಬ್ಬದ ಶುಭಾಶಯ ಕೋರಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ದೇಶದಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸೋಮವಾರ ಜನತೆಗೆ ಗಣೇಶ ಚತುರ್ಥಿಯ...
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ
Updated on: 

ನವದೆಹಲಿ: ದೇಶದಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಸೋಮವಾರ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.

ಹಬ್ಬದ ಪ್ರಯುಕ್ತ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ದೇಶದ ಜನತೆಗೆ ಗಣೇಶ್ ಚತುರ್ಥಿಯ ಶುಭಾಶಯಗಳು. ದೇಶದಲ್ಲಿರುವ ಎಲ್ಲಾ ಅಡೆತಡೆಗಳನ್ನು ತೊಡೆದು ಹಾಕಿ ದೇಶ ಉನ್ನತಿ ಹಾದಿಯಲ್ಲಿ ಸಾಗುವಂತೆ ಗಣೇಶ ಮಾಡಲಿ. ದೇಶವು ಪ್ರಬಲವಾಗಿ ಹಾಗೂ ಸಮೃದ್ಧವಾಗಿ ಬೆಳೆಯುಂತೆ ಮಾಡಲು ಈ ಹಬ್ಬವನ್ನು ಸಮರ್ಪಿಸಿ ಎಂದು ಜನತೆಗೆ ಕರೆ ನೀಡಿದ್ದಾರೆ.

ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೂ ಕೂಡ ಜನತೆಗೆ ಶುಭಾಶಯ ಕೋರಿದ್ದು, ಗಣೇಶ ಬುದ್ಧಿ ಹಾಗೂ ಸಮೃದ್ಧಿಯ ದೇವರು. ಯಾವುದೇ ಕೆಲಸ ಮಾಡುವುದಕ್ಕೂ ಮುನ್ನ ವಿಘ್ನಗಳು ಬಾರದಿರಲಿ ಎಂದು ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಈ ಬಾರಿಯ ಹಬ್ಬ ದೇಶಕ್ಕೆ ಉತ್ತಮ ಭವಿಷ್ಯ, ಸಮೃದ್ಧಿ ನೀಡಲಿ ಹಾಗೂ ಶಾಂತಿ ಹಾಗೂ ಸಾಮರಸ್ಯವನ್ನು ತರಲಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com