ಮಾರಣಾಂತಿಕ ಉಗ್ರ ಸಂಘಟನೆಗಳ ಪಟ್ಟಿ: ಮಾವೋವಾದಿಗೆ ನಾಲ್ಕನೇ ಸ್ಥಾನ

ವಿಶ್ವದ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಭಾರತದ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನ ಪಡೆದಿದೆ.
ಮಾವೋವಾದಿ ಸಂಘಟನೆ (ಸಂಗ್ರಹ ಚಿತ್ರ)
ಮಾವೋವಾದಿ ಸಂಘಟನೆ (ಸಂಗ್ರಹ ಚಿತ್ರ)
Updated on: 

ನವದೆಹಲಿ: ವಿಶ್ವದ ಅತ್ಯಂತ ಭಯಾನಕ ಮತ್ತು ಮಾರಣಾಂತಿಕ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಭಾರತದ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನ ಪಡೆದಿದೆ.

ವಿಶ್ವಾದ್ಯಂತ 2015ರಲ್ಲಿ ನಡೆದ ವಿವಿಧ ಭಯೋತ್ಪಾದಕ ಕೃತ್ಯಗಳ ಕುರಿತಂತೆ ಸಂಶೋಧನೆ ನಡೆಸಿದ್ದ ಅಮೆರಿಕದ ನ್ಯಾಷನಲ್ ಕನ್ಸೋರ್ಟಿಯಂ (ರಾಷ್ಟ್ರೀಯ ಒಕ್ಕೂಟ) ಸಂಸ್ಥೆಯು ಈ ವರದಿ  ನೀಡಿದ್ದು, ವರದಿಯಲ್ಲಿ ವಿಶ್ವದ ಪ್ರಮುಖ ಮಾರಣಾಂತಿಕ ಉಗ್ರ ಸಂಘಟನೆಗಳಲ್ಲಿ ಭಾರತದ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನ ಪಡೆದಿದೆ. ಪಾಕಿಸ್ತಾನ ಮೂಲದ ತಾಲಿಬಾನ್ ಉಗ್ರ  ಸಂಘಟನೆ ಮೊದಲ ಸ್ಥಾನದಲ್ಲಿದ್ದು, ಇರಾಕ್ ಮತ್ತು ಸಿರಿಯಾ ಮೂಲದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ 2ನೇ ಸ್ಥಾನದಲ್ಲಿದೆ. ಇನ್ನು ಆಫ್ರಿಕಾ ಖಂಡದಲ್ಲಿ ತನ್ನ ಭೀಬತ್ಸ ಕೃತ್ಯಗಳನ್ನು  ಮುಂದುವರೆಸಿರುವ ಬೋಕೋಹರಾಮ್ ಉಗ್ರ ಸಂಘಟನೆ ಮೂರನೇ ಸ್ಥಾನದಲ್ಲಿದ್ದು, ಈಶಾನ್ಯ ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಮಾವೋವಾದಿ ಸಂಘಟನೆ ನಾಲ್ಕನೇ ಸ್ಥಾನದಲ್ಲಿದೆ.

2015ರಲ್ಲಿ ವಿಶ್ವಾದ್ಯಂತ 11,774 ಉಗ್ರಗಾಮಿ ದಾಳಿಗಳು ನಡೆದಿದ್ದು, ಈ ದಾಳಿಗಳಲ್ಲಿ ಒಟ್ಟು 28,328 ಮಂದಿ ಸಾವಿಗೀಡಾಗಿದ್ದಾರೆ. ಅಂತೆಯೇ 35,320 ಮಂದಿ ಗಾಯಗೊಂಡಿದ್ದಾರೆ. ಇರಾಕ್,  ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ದೇಶಗಳ ಬಳಿಕ ಅತಿ ಹೆಚ್ಚು ಭಯೋತ್ಪಾದಕ ದಾಳಿಗೊಳಗಾದ ದೇಶ ಎಂದರೆ ಅದು ಭಾರತ. ಭಾರತದಲ್ಲಿ ನಡೆದ 791 ಉಗ್ರ ದಾಳಿಗಳ ಪೈಕಿ ಮಾವೋವಾದಿ  ಸಂಘಟನೆ ಶೇ.43 ರಷ್ಟು ದಾಳಿಗಳನ್ನು ನಡೆಸಿದ್ದು, ಈ ದಾಳಿಗಳಿಂದಾಗಿ 289 ಮಂದಿ ಸಾವಿಗೀಡಾಗಿದ್ದಾರೆ.

2015ರಲ್ಲಿ ಮಾವೋವಾದಿಗಳು ನಡೆಸಿದ 343 ಉಗ್ರ ದಾಳಿಗಳ ಪೈಕಿ 176 ಮಂದಿ ಸಾವನ್ನಪ್ಪಿದ್ದರು. ಇನ್ನು ಮಾವೋವಾದಿಗಳ ದಾಳಿಯಿಂದಾಗಿ ಹೆಚ್ಚು ಹಾನಿಗೊಳಗಾದ ರಾಜ್ಯವೆಂದರೆ ಛತ್ತೀಸ್  ಘಡ. ಒಟ್ಟಾರೆ ಮಾವೋ ದಾಳಿಗಳ ಪೈಕಿ ಶೇ.21ರಷ್ಟು ದಾಳಿಗಳು ಛತ್ತೀಸ್ ಗಡದಲ್ಲಿಯೇ ನಡೆದಿದ್ದು, ಮಣಿಪುರದಲ್ಲಿ ಶೇ.12, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.11 ಹಾಗೂ ಜಾರ್ಖಂಡ್ ನಲ್ಲಿ  ಶೇ.10 ರಷ್ಟು ದಾಳಿಗಳು ನಡೆದಿವೆ.

ಇದೇ 2015ರಲ್ಲಿ ತಾಲಿಬಾನ್ ನಡೆಸಿದ 1,093 ದಾಳಿಗಳಿಂದಾಗಿ 4,512 ಮಂದಿ ಸಾವನ್ನಪ್ಪಿದ್ದರೆ, ಇಸಿಸ್ ಉಗ್ರಗಾಮಿ ಸಂಘಟಟನೆ ನಡೆಸಿದ 931 ದಾಳಿಗಳಿಂದಾಗಿ 6,050 ಮಂದಿ  ಸಾವಿಗೀಡಾಗಿದ್ದಾರೆ. ಅಂತೆಯೇ ಆಫ್ರಿಕಾ ಮೂಲದ ಬೋಕೋ ಹರಾಮ್ ನಡೆಸಿದ 491 ದಾಳಿಗಳಿಂದಾಗಿ 5,450 ಮಂದಿ ಹತರಾಗಿದ್ದಾರೆ ಎಂದು ನ್ಯಾಷನಲ್ ಕನ್ಸೋರ್ಟಿಯಂ ಸಂಸ್ಥೆ ಮಾಹಿತಿ  ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com