

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಭಾನುವಾರ ಮುಂಜಾನೆ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 20ಕ್ಕೇರಿದೆ. ಈ ಸಂಬಂಧ ಇಡೀ ದೇಶವೇ ಆಕ್ರೋಶ ವ್ಯಕ್ತ ಪಡಿಸುತ್ತಿದೆ.
ಭಾರತೀಯ ಸೈನಿಕರ ಮೇಲೆ ಉಗ್ರರು ನಡೆಸಿರುವ ದಾಳಿ ಸಂಬಂಧ ಪ್ರತಿಕ್ರೆಯೆ ನೀಡಿರುವ ಬಾಕ್ಸರ್ ಮನೋಜ್ ಕುಮಾರ್, ಪಾಕಿಸ್ತಾನಕ್ಕೆ ಬುಲೆಟ್ಸ್ ಮತ್ತು ಗ್ರೆನೇಡ್ ಗಳಿಂದ ಉತ್ತರಿಸುವ ಕಾಲ ಬಂದಿದೆ. ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಕಠಿಣ ನಿಲುವು ತೆಗೆದು ಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಉಗ್ರರಿಗೆ ಪ್ರೀತಿಯ ಭಾಷೆ ಅರ್ಥವಾಗುವುದಿಲ್ಲ, ಹೀಗಾಗಿ ಇಂಥ ಘಟನೆಗಳು ಯಾವಾಗಲೂ ನಡೆಯುತ್ತಿರುತ್ತವೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.