ರಫೆಲ್ ಜೆಟ್ ಒಪ್ಪಂದಕ್ಕೆ ಇಂದು ಸಹಿ

ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸುತ್ತಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಲಿದ್ದಾರೆ.
ರಫೆಲ್  ಜೆಟ್
ರಫೆಲ್ ಜೆಟ್
Updated on

ನವದೆಹಲಿ: ಫ್ರೆಂಚ್ ನ ರಕ್ಷಣಾ ಸಚಿವ  ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸುತ್ತಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಲಿದ್ದಾರೆ.

ಫ್ರಾನ್ಸ್ ನೊಂದಿಗೆ ಚೌಕಾಶಿ ಮೂಲಕ ಭಾರತ 7.8 ಬಿಲಿಯನ್ ಯುರೋಗಳಿಗೆ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದು ಅಂತಿಮವಾಗಿದ್ದು, ಒಪ್ಪಂದಕ್ಕೆ ಇಂದು(ಸೆ.23) ರಂದು ಸಹಿಬೀಳಲಿದೆ. ಒಪ್ಪಂದ ಪ್ರಕ್ರಿಯೆಯಲ್ಲಿ ರಾಫೆಲ್ ಜೆಟ್ ತಯಾರಕ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಸೇರಿದಂತೆ ಫ್ರೆಂಚ್ ನ ಹಲವು ಸಂಸ್ಥೆಗಳ ಸಿಇಒ ಗಳು ಭಾಗಿಯಾಗಲಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರ್ಕಾರ ರದ್ದುಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋಗಳಷ್ಟು ಹಣ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದ ನಡೆದ 36 ತಿಂಗಳಲ್ಲಿ ರಾಫೆಲ್ ಜೆಟ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು, 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ.

ಈ ರಾಫೆಲ್ ಮೆಟೊರೊ ಶ್ರೇಣಿಯ (ದೂರವ್ಯಾಪಿ) ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ದೃಷ್ಠಿವ್ಯಾಪಿಗೂ ಮಿಗಿಲಾಗಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯಲ್ಲಿ ಗುರಿ ತಪ್ಪುವ ಸಾಧ್ಯತೆ ಇತರ ಕ್ಷಿಪಣಿಗಳಿಗಿಂತ ಮೂರುಪಟ್ಟಿ ಕಡಿಮೆ ಇದೆ. ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಜನವರಿ ತಿಂಗಳಲ್ಲಿ ಪ್ರಾನ್ಸ್ ಮತ್ತು ಭಾರತ ಸರ್ಕಾರಗಳು ಹಣಕಾಸು ವಿಚಾರ ಹೊರತುಪಡಿಸಿ ಸಹಿ ಹಾಕಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com