ಗರ್ಭಿಣಿ ನರ್ಸ್‌ ಮೇಲೆ ಹಲ್ಲೆ: ಅಕಾಲಿ ದಳ ನಾಯಕ, ಪುತ್ರನ ಬಂಧನ

ಖಾಸಗಿ ಆಸ್ಪತ್ರೆಯೊಂದರಲ್ಲಿ ಸರದಿಯಲ್ಲಿ ಕಾಯುವಂತೆ ಹೇಳಿದ ಗರ್ಭಿಣಿ ನರ್ಸ್‌ ಮೇಲೆ ಹಲ್ಲೆ ಮಾಡಿದ್ದ ಅಕಾಲಿ ದಳದ ನಾಯಕ ಹಾಗೂ...
ಹಲ್ಲೆ ನಡೆಸುತ್ತಿರುವ ಅಕಾಲಿ ದಳ ನಾಯಕ
ಹಲ್ಲೆ ನಡೆಸುತ್ತಿರುವ ಅಕಾಲಿ ದಳ ನಾಯಕ
ಮೋಗಾ: ಖಾಸಗಿ ಆಸ್ಪತ್ರೆಯೊಂದರಲ್ಲಿ ಸರದಿಯಲ್ಲಿ ಕಾಯುವಂತೆ ಹೇಳಿದ ಗರ್ಭಿಣಿ ನರ್ಸ್‌ ಮೇಲೆ ಹಲ್ಲೆ ಮಾಡಿದ್ದ ಅಕಾಲಿ ದಳದ ನಾಯಕ ಹಾಗೂ ಆತನ ಪುತ್ರನನ್ನು ಶನಿವಾರ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯಲ್ಲಿ ನರ್ಸ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಾವು ಪರಮ್‌ಜಿತ್‌ ಸಿಂಗ್‌ ಮತ್ತು ಆತನ ಪುತ್ರ ಗುರುಜಿತ್‌ ಸಿಂಗ್ ನನ್ನು ಬಂಧಿಸರುವುದಾಗಿ ಮೋಗಾ ಡಿಎಸ್ ಪಿ ಜಸ್ಪಾಲ್ ಸಿಂಗ್ ಅವರು ಹೇಳಿದ್ದಾರೆ.
ಚಂಡೀಗಢದಿಂದ 175 ಕಿ.ಮೀ. ದೂರದ ಮೋಗಾದಲ್ಲಿನ ಆಸ್ಪತ್ರೆಯಲ್ಲಿ ನರ್ಸ್ ಗೆ ಕಪಾಳಮೋಕ್ಷ ಮಾಡಿ, ಹಲ್ಲೆಗೈದ ಅಮಾನುಷ ಘಟನೆ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಗಳಿಬ್ಬರ ಮೇಲೆ ಅತಿಕ್ರಮಣ, ಕ್ರಿಮಿನಲ್‌ ಬೆದರಿಕೆಯ ಕೇಸನ್ನು ದಾಖಲಿಸಿಕೊಂಡಿದ್ದರು.
ಕಳೆದ ಗುರುವಾರ ಪರಮ್‌ಜಿತ್‌ ಸಿಂಗ್‌ ಮತ್ತು ಆತನ ಪುತ್ರ ಗುರುಜಿತ್‌ ಜತೆಗೂಡಿ ಗುಪ್ತಾ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರನ್ನು ಕರೆದೊಯ್ಯಲು ಅವರು ಬಂದಿದ್ದರು. ಆದರೆ ನರ್ಸ್‌ ಅವರಿಗೆ ಸರದಿಯಲ್ಲಿ ಕಾಯುವಂತೆ ಸೂಚಿಸಿದ್ದಳು. ತಂದೆ ಮತ್ತು ಮಗ ಇದರಿಂದ ಸಿಟ್ಟುಗೊಂಡು ನರ್ಸ್‌ ಮೇಲೆ ಹಲ್ಲೆ ನಡೆಸಿದ್ದರು. ಪರಮ್‌ಜಿತ್‌ ಸಿಂಗ್‌ ಅವರ ಪತ್ನಿ ದಲ್‌ಜಿತ್‌ ಕೌರ್‌ ಗ್ರಾಮ ಮುಖ್ಯಸ್ಥೆ (ಸರಪಂಚ್‌) ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com