ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಚಂಪಾರಣ್ಯ ಸತ್ಯಾಗ್ರಹ ಮಾಡುವ ಮೂಲಕ ಇದನ್ನು ಸಾಬೀತು ಪಡಿಸಿದ್ದಾರೆ. ಅಧಿಕಾರದಲ್ಲಿದ್ದವರು ಯಾವಾಗಲು ಸರಿಯಾಗಿರುತ್ತಾರೆ ಎಂದು ತಿಳಿಯಲು ಸಾಧ್ಯವಿಲ್ಲ ಎಂದ ರಾಹುಲ್, ಬ್ರಿಟಿಷರು ನಮ್ಮನ್ನು ವಶಪಡಿಸಿಕೊಳ್ಳಲು ಏನು ಕಾರಣ? ನಮ್ಮಲ್ಲಿನ ಭಯ. ಆದರೆ ಇದಕ್ಕೆಲ್ಲಾ ಸೆಡ್ಡು ಹೊಡೆದು ಮಹಾತ್ಮಾ ಗಾಂಧಿಜೀ ಅವರು ಚಂಪಾರಣ್ಯ ಸತ್ಯಾಗ್ರಹ ಶುರು ಮಾಡಿ ಜನರಿಗೆ ಭಯಪಡದಂತೆ ತಿಳಿ ಹೇಳಿದರು. ಜತೆಗೆ ಅಧಿಕಾರದ ವಿರುದ್ಧ ಹೋರಾಡುವಂತೆ ಮಾಡಿದರು ಕೊನೆಗೆ ಸತ್ಯಕ್ಕೆ ಜಯ ಸಂದಿತು ಎಂದರು.