ಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ, ಲೂಟಿ ಮಾಡಿದವರು ಹಣ ಹಿಂತಿರುಗಿಸಲೇಬೇಕು: ಮೋದಿ

ಹಿಂದೆ ಮಧ್ಯಮವರ್ಗ ಬಡಜನರಿಂದ ಹೇಗೆ ಹಣ ಲೂಟಿ ಮಾಡಿದರೋ ಅವರು ಮುಂದಿನ ದಿನಗಳಲ್ಲಿ ಹಣವನ್ನು ಅದೇ ರೀತಿಯಲ್ಲಿ ಹಿಂತಿರುಗಿಸುತ್ತಾರೆ ಎಂದು ಪ್ರಧಾನಿ ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 
ನವದೆಹಲಿ: ಹಿಂದೆ ಮಧ್ಯಮವರ್ಗ ಬಡಜನರಿಂದ ಹೇಗೆ ಹಣ ಲೂಟಿ ಮಾಡಿದರೋ ಅವರು ಮುಂದಿನ ದಿನಗಳಲ್ಲಿ ಹಣವನ್ನು ಅದೇ ರೀತಿಯಲ್ಲಿ ಹಿಂತಿರುಗಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಟ್ವಿಟ್ಟರ್ ನಲ್ಲಿ ತಮ್ಮ ಹಿಂಬಾಲಕರೊಬ್ಬರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದಲ್ಲಿ ಭ್ರಷ್ಟಾಚಾರಕ್ಕೆ ಜಾಗವಿಲ್ಲ ಎಂದು ಹೇಳಿದ್ದಾರೆ.
ಮದ್ಯದ ದೊರೆ ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ಹಣ ವಂಚಸಿದ ಪ್ರಕರಣದಲ್ಲಿ ಬಂಧಿಸಿ ನಂತರ ಕೋರ್ಟ್ ನಿಂದ ಜಾಮೀನು ಪಡೆದ  ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಭ್ರಷ್ಟಾಚಾರ ಕೇವಲ ಹಣವನ್ನು ಮಾತ್ರ ಲೂಟಿ ಮಾಡುವುದಿಲ್ಲ ನಮ್ಮ ಗೌರವವನ್ನು ಕೂಡ ದರೋಡೆ ಮಾಡುತ್ತದೆ ಎಂದು ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಫಾಲೋವರ್ ಒಬ್ಬರು ಟ್ವೀಟ್ ಮಾಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com