ದೇಶ

ಕಾಶ್ಮೀರದಲ್ಲಿ ಸೇನೆ ವಿರುದ್ಧ ಕಲ್ಲು ತೂರಾಟ: ನಾಗರಿಕರ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ!

ಕಾಶ್ಮೀರದಲ್ಲಿ ಸೇನೆ ವಿರುದ್ಧ ಕಲ್ಲು ತೂರಾಟ: ನಾಗರಿಕರ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ!
ಸಂಗ್ರಹ ಚಿತ್ರ
Published On :

ಶ್ರೀನಗರ: ಉಗ್ರರ ದಮನ ಕಾರ್ಯ ಮುಂದುಪರೆದಿರುವಂತೆಯೇ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಹಾವಳಿ ಕೂಡ ಹೆಚ್ಚಾಗಿದ್ದು, ಭದ್ರತಾ ಪಡೆಗಳೊಂದಿಗೆ ಘರ್ಷಣೆಯ ವೇಳೆ ಗುಂಡೇಟಿನಿಂದ ಮತ್ತೋರ್ವ ನಾಗರಿಕರು  ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಕಳೆದ ಎರಡು ದಿನಗಳಿಂದ ಭದ್ರತಾ ಪಡೆಗಳೊಂದಿಗೆ ನಡೆಯುತ್ತಿರುವ  ಘರ್ಷಣೆಯಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ ಮೂರಕ್ಕೇರಿದ್ದು, ಇಂದು ಸಾವನ್ನಪ್ಪಿದ ಯುವಕನನ್ನು 25 ವರ್ಷದ ಮುಹಮ್ಮದ್ ಸಯೀದ್ ಭಟ್  ಎಂದು ಗುರುತಿಸಲಾಗಿದೆ.

ಕಾಶ್ಮೀರದ ಶೋಪಿಯಾನ್ ನಲ ಅವ್ನೀರಾದಲ್ಲಿ ನಿನ್ನೆ ಹಿಜ್ಬುಲ್ ಕಮಾಂಡರ್ ಯಾಸಿನ್ ಐಟೂ ಸೇರಿದಂತೆ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಈ ಘಟನೆ ಬಳಿಕ ಕಾಶ್ಮೀರದಲ್ಲಿ ಮತ್ತೆ ಕಲ್ಲು ತೂರಾಟ ಆರಂಭವಾಗಿದ್ದು,  ಭದ್ರತಾ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಅಶ್ರುವಾಯು ಪ್ರಯೋಗ ಮತ್ತೆ ಪೆಲ್ಲಟ್ ಗಳ ಬಳಕೆ ಮಾಡಲಾಗುತ್ತಿದ್ದು. ಈ ವೇಳೆ ಗುಂಡು ಹಾರಿಸಿದ ಪರಿಣಾಮವಾಗಿ  ಮುಹಮ್ಮದ್ ಸಯೀದ್ ಭಟ್ ಸೇರಿದಂತೆ 12 ಮಂದಿಗೆ ಗಂಭೀರ ಗಾಯವಾಗಿತ್ತು. ಈ ಪೈಕಿ ಸಯೀದ್ ಭಟ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಎಂದು ತಿಳಿದುಬಂದಿದೆ.

ನಿನ್ನೆ ಭದ್ರತಾ ಪಡೆಗಳೊಂದಿಗೆ ಘರ್ಷಣೆಯ ವೇಳೆ ಗಾಯಗೊಂಡಿದ್ದ ಓವೈಸ್ ಅಹ್ಮದ್ ಮತ್ತು ಇನ್ನೊಬ್ಬರು ಮೃತಪಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.