ಭಾರತದೊಂದಿಗೆ ಶಾಂತಿ, ಸಹಬಾಳ್ವೆ ದೂರದ ಮಾತು: ಪಾಕ್ ಪತ್ರಿಕೆಯ ಸಂಪಾದಕೀಯ ಬರಹ

ಏಳು ದಶಕಗಳಿಂದ ಕಾಣುತ್ತಿರುವ ದ್ವೇಷ, ಹಗೆತನಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಇಸ್ಲಮಾಬಾದ್: ಏಳು ದಶಕಗಳಿಂದ ಕಾಣುತ್ತಿರುವ ದ್ವೇಷ, ಹಗೆತನಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಶಾಂತಿಯುತ ಸಹಬಾಳ್ವೆ ನಿಸ್ಸಂಶಯವಾಗಿ ದೂರದ ನಿರೀಕ್ಷೆ ಎಂದು ಪಾಕಿಸ್ತಾನದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
ಡೈಲಿ ಟೈಮ್ಸ್ ಎಂಬ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಪಾಕಿಸ್ತಾನ ಮತ್ತು ಭಾರತ ಪರಸ್ಪರ ಹೊಂದಾಣಿಕೆ, ಸಹಬಾಳ್ವೆಯಿಂದ ಬದುಕುವುದನ್ನು ಇನ್ನೂ ಕಲಿತಿಲ್ಲ ಎಂದು ಹೇಳಿದೆ.
ವಾಸ್ತವವಾಗಿ ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಹದಗೆಡುತ್ತಾ ಹೋಗುತ್ತಿದ್ದು, ಅವರ ಸಾಮರ್ಥ್ಯದಿಂದ ಪರಸ್ಪರ ಹಾನಿ ಮಾಡಲು ನೋಡುತ್ತಿವೆ ಎಂದಿದೆ.
ಎರಡೂ ದೇಶಗಳು ಅಪಾಯಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ತಮ್ಮ ನೆರೆ ದೇಶವನ್ನು ದೂಷಿಸುತ್ತಿವೆ.  ಎರಡೂ ದೇಶಗಳಲ್ಲಿ ಶಕ್ತಿಯುತ ಬೆದರಿಕೆಗಳು ದೇಶದ ಅಸ್ತಿತ್ವವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದು, ತಮ್ಮ ತಮ್ಮ ದೇಶದ ವಿದೇಶಾಂಗ ನೀತಿಗಳನ್ನು ನಿರ್ದೇಶಿಸಲು ನೋಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಶಾಂತಿಯುತ ಸಹಬಾಳ್ವೆ ದೂರದ ಮಾತು ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ. 
ಎರಡೂ ರಾಷ್ಟ್ರಗಳು ಯುದ್ಧಗಳಿಗೆ ಪ್ರೇರೇಪಿಸುವುದನ್ನು ಸಂಪಾದಕೀಯದಲ್ಲಿ ಆಪಾದಿಸಿದೆ. ಭಾರತ-ಪಾಕಿಸ್ತಾನ ನಡುವೆ ದ್ವೇಷಕ್ಕೆ ಪಾಕಿಸ್ತಾನವೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಪಾಕಿಸ್ತಾನ ತೆಗೆದುಕೊಳ್ಳುವ ಕೆಲವು ನಿರ್ಧಾರಗಳಿಗೆ ಭಾರತ ಕೂಡ ಕಾರಣವಾಗಿದೆ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com