ಕಲ್ಲು ತೂರಾಟ ಪರಿಸ್ಥಿತಿ ಎದುರಿಸಲು ಪೊಲೀಸ್, ಸಿಆರ್ ಪಿಎಫ್ ಗೆ ತರಬೇತಿ: ಸಿಆರ್ ಪಿಎಫ್ ಡಿಜಿ
ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ಎದುರಾಗುವ ಕಲ್ಲು ತೂರಾಟ ಸಮಸ್ಯೆಯನ್ನು ಎದುರಿಸಲು ಪೊಲೀಸ್, ಸಿಆರ್ ಪಿಎಫ್ ಗೆ ತರಬೇತಿ ನೀಡಲಾಗುತ್ತಿದೆ ಎಂದು ಸಿಆರ್ ಪಿಎಫ್ ಡಿಜಿ ಮಾಹಿತಿ ನೀಡಿದ್ದಾರೆ.
ಶ್ರೀನಗರ: ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಗೆ ಎದುರಾಗುವ ಕಲ್ಲು ತೂರಾಟ ಸಮಸ್ಯೆಯನ್ನು ಎದುರಿಸಲು ಪೊಲೀಸ್, ಸಿಆರ್ ಪಿಎಫ್ ಗೆ ತರಬೇತಿ ನೀಡಲಾಗುತ್ತಿದೆ ಎಂದು ಸಿಆರ್ ಪಿಎಫ್ ಡಿಜಿ ಮಾಹಿತಿ ನೀಡಿದ್ದಾರೆ.
ಪ್ರಮಾಣಿತ ಕಾರ್ಯವಿಧಾನಗಳ(ಎಸ್ಒಪಿ) ಮೂಲಕ ಪೊಲೀಸ್, ಸಿಆರ್ ಪಿಎಫ್ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಯಾವುದೇ ಮಾರಣಾಂತಿಕ ವಸ್ತುಗಳನ್ನು ಬಳಕೆ ಮಾಡದೇ ಕಲ್ಲು ತೂರಾಟಗಾರರನ್ನು ಎದುರಿಸುವ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂಡು ಡಿಜಿ ಹೇಳಿದ್ದಾರೆ.
ಕಾರ್ಯಾಚರಣೆ ವೇಳೆ ಹತರಾದ ಯೋಧರ ಪತ್ನಿಯರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಪಾರ್ಶ್ವದಲ್ಲಿ ಡಿಜಿ ವರದಿಗಾರರೊಂದಿಗೆ ಮಾತನಾಡುತ್ತಿದ್ದರು. " ಜಮ್ಮು-ಕಾಶ್ಮೀರ ಪೊಲೀಸರು, ಸೇನೆ, ಸಿಆರ್ ಪಿಎಫ್ ಯೋಧರು ನಡುವೆ ಉತ್ತಮ ಸಮತ್ವಯತೆ ಇದ್ದು, ಕಾರ್ಯಾಚರಣೆಗಳು ಮುಂದುವರೆಯಲಿವೆ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ 132 ಉಗ್ರರನ್ನು ಹೊಡೆದುರುಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮತ್ತಶ್ಟು ಯಶಸ್ವಿಯಾಗಲಿದೆ ಎಂದು ಸಿಆರ್ ಪಿಎಫ್ ಡಿಜಿ ಹೇಳಿದ್ದಾರೆ.