ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು, ನಿತೀಶ್ ಕುಮಾರ್ ಅವರ ನಿರ್ಧಾರದಿಂದ ಜೆಡಿಯು ಪಕ್ಷದ ಹಲವಾರು ನಾಯಕರು ತಲೆ ಕೆಡಿಸಿಕೊಂಡಿದ್ದಾರೆ. ನಿತೀಶ್ ಅವರ ನಿರ್ಧಾರ ಎಲ್ಲರಲ್ಲೂ ಆಘಾತವನ್ನುಂಟು ಮಾಡಿತ್ತು. ನಿತೀಶ್ ಮಾಡಿದಂತೆ ಈ ವರೆಗೂ ಯಾವುದೇ ನಾಯಕರೂ ಮಾಡಿರಲಿಲ್ಲ. ನಿತೀಶ್ ನೈತಿಕತೆಯನ್ನು ಹತ್ತಿಕ್ಕಿದ್ದಾರೆಂದು ಹೇಳಿದ್ದಾರೆ.