ಭಾರತೀಯ ಸೇನಾಪಡೆಗೆ ಶೀಘ್ರದಲ್ಲೇ ಎಸಿ ಜಾಕೆಟ್ ಪೂರೈಕೆ: ಪರಿಕ್ಕರ್

ಭಾರತೀಯ ವಿಶೇಷ ಸೇನಾಪಡೆಯ ಯೋಧರಿಗೆ ಶೀಘ್ರದಲ್ಲಿಯೇ ಎಸಿ ಜಾಕೆಟ್ ಗಳನ್ು ನೀಡಲಾಗುತ್ತದೆ ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್...
ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್
Updated on: 
ಪಣಜಿ: ಭಾರತೀಯ ವಿಶೇಷ ಸೇನಾಪಡೆಯ ಯೋಧರಿಗೆ ಶೀಘ್ರದಲ್ಲಿಯೇ ಎಸಿ ಜಾಕೆಟ್ ಗಳನ್ು ನೀಡಲಾಗುತ್ತದೆ ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ. 
ಖಾಸಗಿ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿರುವ ಅವರು, ವಿಶೇಷ ಕಾರ್ಯಾಚರಣೆ ಪಡೆಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಯೋಧರ ದೇಹ ಬಿಸಿಯಾಗುತ್ತಿರುತ್ತದೆ. ಈ ವೇಳೆ ಅವರಿಗೆ ಏರ್ ಕಂಡೀಷನ್ ಜಾಕೆಟ್ ಗಳನ್ನು ನೀಡಿದರೆ ಹಿತಕರವನೆಸುತ್ತದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಕುರಿತಂತೆ ಮಾತನಾಡಿರುವ ಅವರು, ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಹಗುರ ವಿಮಾನವಾಗಿದ್ದು, 3.5 ಟನ್ ರಷ್ಟು ಪೇಲೋಡ್ ನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ವಿಮಾನವನ್ನು ಸ್ವದೇಶದಲ್ಲಿಯೇ ವಿನ್ಯಾಸಗೊಳಿಸಲಾಗಿದ್ದು, ಹಗುರವಾದ ವಿಮಾನ ಎಂಬುದನ್ನು ಹೊರತಾಗಿಸಿದರೆ, ವಿಮಾನ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com