ರಾಷ್ಟ್ರಗೀತೆಗೆ ಅಗೌರವ: 3 ಕಾಶ್ಮೀರ ಯುವಕರ ಬಂಧನ

ಚಿತ್ರಿಮಂದಿರದಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಎದ್ದುನಿಲ್ಲದೆ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಮೇರೆಗೆ ಮೂವರು ಕಾಶ್ಮೀರಿ ಯುವಕರನ್ನು ಬಂಧನಕ್ಕೊಳಪಡಿಸಲಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ಚಿತ್ರಿಮಂದಿರದಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಎದ್ದುನಿಲ್ಲದೆ ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಮೇರೆಗೆ ಮೂವರು ಕಾಶ್ಮೀರಿ ಯುವಕರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ. 
ಬಂಧಿತ ಯುವಕರನ್ನು ಓಮರ್ ಫಯಾಜ್ ಲ್ಯೂನಿ, ಮುದಾಬಿರ್ ಶಬ್ಬೀರ್ ಮತ್ತು ಜಮೀಲ್ ಗುಲ್ ಎಂದು ಗುರ್ತಿಸಲಾಗಿದೆ. ಮೂವರು ಯುವಕರು ಹೈದರಾಬಾದ್ ನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆಂದು ತಿಳಿದುಬಂದಿದೆ. 
ಸಿನಿಮಾ ನೋಡುವ ಸಲುವಾಗಿ ಬಂಧನಕ್ಕೊಳಗಾಗಿರುವ ಮೂವರು ಕಾಶ್ಮೀರಿ ಯುವಕರು ಹೈದರಾಬಾದ್ ನ ಅತ್ತಾಪುರ್ ನಲ್ಲಿರುವ ಸಿನಿ ಮಂತ್ರ ಚಿತ್ರಮಂದಿರಕ್ಕೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ನ ಆದೇಶದಂತೆಯೇ ಸಿನಿಮಾ ಆರಂಭವಾಗುವುದಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಹಾಕಿದ್ದರು. ಘಟನೆ ನಡೆದ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಐಜಿ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರೂ ಕೂಡ ಹಾಜರಿದ್ದರು. 
ರಾಷ್ಟ್ರಗೀತೆ ಹಾಕಿದ ಕೂಡಲೇ ಚಿತ್ರಮಂದಿರದಲ್ಲಿದ್ದ ಜನರು ಎದ್ದು ನಿಂತು ಗೌರವ ಸೂಚಿಸುತ್ತಿದ್ದರು ಆದರೆ, ಮೂವರು ಕಾಶ್ಮೀರಿ ಯುವಕರು ಮಾತ್ರ ಎದ್ದುನಿಂತಿರಲಿಲ್ಲ. ಇದನ್ನು ಗಮನಿಸಿದ ಅಧಿಕಾರಿ ಕೂಡಲೇ ರಾಜೇಂದ್ರನಗರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ, ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ಬಂಧನಕ್ಕೊಳಪಡಿಸಿದ್ದರೆ. ಪ್ರಸ್ತುತ ಮೂವರು ಯುವಕರ ವಿರುದ್ಧ ರಾಷ್ಟ್ರ ಗೌರವ ಅವಮಾನ ನಿಂಬಂಧ ಅಧಿನಿಯಮ 1971ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com