ಭಾರತಕ್ಕೆ ಸಿಗಲಿದೆ ಶ್ರೀಲಂಕಾದ ಹ್ಯಾಂಬಂಟೊಟ ವಿಮಾನ ನಿಲ್ದಾಣದ ನಿರ್ವಹಣೆ?

Published On :
ನವದೆಹಲಿ: ಶ್ರೀಲಂಕಾದ ಹ್ಯಾಂಬಂಟೊಟ ವಿಮಾನ ನಿಲ್ದಾಣವನ್ನು ನಡೆಸುವ ಜವಾಬ್ದಾರಿಯನ್ನು ಭಾರತಕ್ಕೆ ವಹಿಸುವ ಸಾಧ್ಯತೆ ಇದೆ.
ಶ್ರೀಲಂಕಾದ ಸಿವಿಲ್ ಆವಿಯೇಶನ್ ಸಚಿವಾಲಯ ಹ್ಯಾಂಬಂಟೊಟದಲ್ಲಿನ ಮಟ್ಟಲ ರಾಜಪಕ್ಷ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾರತೀಯ ಸಂಸ್ಥೆಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಸಂಪುಟಕ್ಕೆ ಸಲ್ಲಿಸಿದೆ.
ಈ ವಿಮಾನ ನಿಲ್ದಾಣದ ಜವಾಬ್ದಾರಿ ಭಾರತಕ್ಕೆ ಸಿಕ್ಕರೆ ಇದು ಚೀನಾ ಮತ್ತು ಭಾರತದ ನಡುವೆ ಸಮತೋಲವನ್ನು ಕಾಪಾಡುವ ಶ್ರೀಲಂಕಾದ ಧೋರಣೆಗೆ ಸಹಾಯಕವಾಗಲಿದೆ.
ಶ್ರೀಲಂಕಾ ಹ್ಯಾಂಬಂಟೊಟ ಬಂದರಿನಲ್ಲಿ ವಿಮಾನ ನಿಲ್ದಾಣವನ್ನು ಚೀನಾದ ಸಹಾಯದೊಂದಿಗೆ ನಿರ್ಮಿಸಿತ್ತು. ಚೀನಾ ಅದಾಗಲೇ ಶ್ರೀಲಂಕಾದಲ್ಲಿ ಸೀಪೋರ್ಟ್ ಅನ್ನು ಹೊಂದಿದ್ದು ಹ್ಯಾಂಬಂಟೊಟ ವಿಮಾನ ನಿಲ್ದಾಣದ ನಿರ್ವಹಣೆಗೂ ಬಿಡ್ ಮಾಡಿದೆ.
ಸದ್ಯ ಶ್ರೀಲಂಕಾ ಭಾರತದ ಪ್ರಸ್ತಾವನೆಯನ್ನು ವಿಶೇಷವಾಗಿ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


