ಕಾಂಗ್ರೆಸ್ ರಾಮ ಮಂದಿರ ವಿವಾದವನ್ನು ಚುನಾವಣೆಗೆ ಲಿಂಕ್ ಮಾಡುತ್ತಿದೆ: ಪ್ರಧಾನಿ ಮೋದಿ

ಕಾಂಗ್ರೆಸ್ ರಾಮ ಮಂದಿರ ವಿವಾದವನ್ನು ಗುಜರಾತ್ ಮತ್ತು ಮುಂದಿನ ಲೋಕಸಭೆ ಚುನಾವಣೆಗೆ ಲಿಂಕ್ ಮಾಡುತ್ತಿದೆ ಎಂದು....
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 
ಅಹಮದಾಬಾದ್: ಕಾಂಗ್ರೆಸ್ ರಾಮ ಮಂದಿರ ವಿವಾದವನ್ನು ಗುಜರಾತ್ ಮತ್ತು ಮುಂದಿನ ಲೋಕಸಭೆ ಚುನಾವಣೆಗೆ ಲಿಂಕ್ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆರೋಪಿಸಿದ್ದಾರೆ.
ಇಂದು ಗುಜರಾತ್ ನ ಧಂಡುಕಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, 2019ರ ಲೋಕಸಭಾ ಚುನಾವಣೆ ವರೆಗೆ ಅಯೋಧ್ಯೆ ವಿವಾದವನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕಪಿಲ್‌ ಸಿಬಲ್‌ ಅವರು ತೀವ್ರ ವಾಗ್ದಾಳಿ ನಡೆಸಿದರು. 
ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಅವರು ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ಬಾಬರಿ ಮಸೀದಿ ಪರವಾಗಿ ವಾದಿಸಿದ್ದಾರೆ(ಇದು ಅವರ ಹಕ್ಕು). ವಾದಿಸಲು ಅವರು ಅರ್ಹರು. ಆದರೆ ವಿಚಾರಣೆಯನ್ನು 2019ರ ವರೆಗೆ ಮುಂದೂಡಬೇಕೆಂದು ಹೇಳುವುದು ಸರಿಯೇ? ಎಂದು ಮೋದಿ ಪ್ರಶ್ನಿಸಿದ್ದಾರೆ.
ಕಪಿಲ್ ಸಿಬಲ್ ಅವರು ರಾಮ ಮಂದಿರವನ್ನು ಚುನಾವಣೆಗೆ ಏಕೆ ಲಿಂಕ್ ಮಾಡುತ್ತಿದ್ದಾರೆ? ಆ ರೀತಿ ವಿಚಾರ ಮಾಡುವುದು ಸರಿಯೇ? ಎಂದು ಮೋದಿ ಜನತೆಯನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ದೇಶದ ಬಗ್ಗೆ ಚಿಂತೆ ಇಲ್ಲ. ಕೇವಲ ರಾಮ ಮಂದಿರವನ್ನು ಚುನಾವಣೆ ಜೊತೆ ಥಳಕು ಹಾಕುವುದು ಮಾತ್ರ ಗೊತ್ತು ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ನಿನ್ನೆ ಆಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಸುನ್ನಿ ವಕ್ಫ್ ಮಂಡಳಿ ಪರ ವಾದಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಮುಂದಿನ ಲೋಕಸಭಾ ಚುನಾವಣೆ ಮುಗಿಯುವವರೆಗೂ ಅಂತಿಮ ವಿಚಾರಣೆ ಆರಂಭಿಸಬೇಡಿ. ಪ್ರಕರಣದ ವಿಚಾರಣೆಯನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಿ ಎಂದು ಮನವಿ ಮಾಡಿದ್ದರು. ಆದರೆ ಕೋರ್ಟ್ ಸಿಬಲ್ ಮನವಿಯನ್ನು ತಿರಸ್ಕರಿಸಿ ವಿಚಾರಣೆಯನ್ನು 2018ರ ಫೆಬ್ರುವರಿ 8ಕ್ಕೆ ನಿಗದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com