ರಾಯ್ ಪುರ: ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪಡೆ(ಸಿಆರ್ಪಿಎಫ್) ಯೋಧನೊಬ್ಬ ನಾಲ್ವರು ಸಹೋದ್ಯೋಗಿಗಳನ್ನು ಕ್ಯಾಂಪ್ ನಲ್ಲೇ ಹತ್ಯೆಗೈದಿದ್ದಾರೆ.
ಸಹೋದ್ಯೋಗಿಗಳೊಂದಿಗೆ ಮಾತಿನ ಚಕಮಿಕಿ ನಡೆದಿದ್ದು ನಂತರ ಕಾನ್ ಸ್ಟೆಬಲ್ ಸನತ್ ಕುಮಾರ್ ಗುಂಡು ಹಾರಿಸಿದ್ದಾನೆ. ಮೃತರಲ್ಲಿ ಇಬ್ಬರು ಸಬ್ ಇನ್ ಸ್ಪೆಕ್ಟರ್ ಆಗಿದ್ದು ನಾಲ್ವರು ಸನತ್ ಕುಮಾರ್ ಗಿಂತ ಹಿರಿಯ ಹುದ್ದೆಯಲ್ಲಿದ್ದರು.
ಸನತ್ ಕುಮಾರ್ ಉತ್ತರಪ್ರದೇಶದ ಫಿರೋಜಾಬಾದ್ ಮೂಲದವರಾಗಿದ್ದಾರೆ. ಬಸಗುಡಾದಲ್ಲಿ ನಕ್ಸಲ್ ನಿಗ್ರಹ ದಳದಲ್ಲಿ ಈ ಘಟನೆ ನಡೆದಿದೆ. ಶೂಟ್ ಔಟ್ ನಲ್ಲಿ ಓರ್ವ ಎಎಸ್ಐಗೆ ಗಾಯವಾಗಿದ್ದು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
#Visuals from Chhattisgarh: 1 injured jawan & bodies of 4 killed in firing by a CRPF jawan in Bijapur's Basaguda CRPF 168 Battalion Camp brought to hospital in Jagdalpur, accused apprehended & special team formed to probe the case pic.twitter.com/E7PpNQKk6h