ಹಿಮಾಚಲ ಪ್ರದೇಶ: ಚುನಾವಣೆ ಗೆಲುವಿನ ಬಳಿಕ ಹೊಸ ಸಿಎಂ ಆಯ್ಕೆಗಾಗಿ ಬಿಜೆಪಿ ಸರ್ಕಸ್ ಆರಂಭ!

ಕಾಂಗ್ರೆಸ್ ಪಕ್ಷದ ವಶದಲ್ಲಿದ್ದ ಹಿಮಾಚಲ ಪ್ರದೇಶವನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಚುನಾವಣೆ ಗೆಲುವಿನ ಮೂಲಕ ಕಸಿದಿದ್ದಾರೆಯಾದರೂ, ಇದೀಗ ಹೊಸ ಸಿಎಂಗಾಗಿ ಬಿಜೆಪಿಯಲ್ಲಿ ಆಂತರಿಕ ಸರ್ಕಸ್ ಆರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕಾಂಗ್ರೆಸ್ ಪಕ್ಷದ ವಶದಲ್ಲಿದ್ದ ಹಿಮಾಚಲ ಪ್ರದೇಶವನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಚುನಾವಣೆ ಗೆಲುವಿನ ಮೂಲಕ ಕಸಿದಿದ್ದಾರೆಯಾದರೂ, ಇದೀಗ ಹೊಸ ಸಿಎಂಗಾಗಿ ಬಿಜೆಪಿಯಲ್ಲಿ ಆಂತರಿಕ  ಸರ್ಕಸ್ ಆರಂಭವಾಗಿದೆ.
ಈ ಹಿಂದೆ ಬಿಜೆಪಿ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದ ಪಿಕೆ ಧುಮಾಲ್ ಅವರ ಸೋಲಿನೊಂದಿಗೆ ಬಿಜೆಪಿಗೆ ಹೊಸ ತಲೆನೋವು ಶುರುವಾಗಿದ್ದು, ಧುಮಾಲ್ ನಂತರ ಸಿಎಂ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ  ಗಂಭೀರ ಚರ್ಚೆಗಳು ಆರಂಭವಾಗಿದೆ. ಇದೇ ಕಾರಣಕ್ಕೆ ಹಿಮಾಚಲ ಪ್ರದೇಶಕ್ಕೆ ಕೇಂದ್ರದ ಹಲವು ಘಟಾನುಘಟಿ ನಾಯಕರನ್ನು ರವಾನೆ ಮಾಡಲಾಗಿದ್ದು, ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಗೃಹ ಸಚಿವ ರಾಜನಾಥ್ ಸಿಂಗ್,  ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹಿಮಾಚಲ ಪ್ರದೇಶಕ್ಕೆ ರವಾನೆ ಮಾಡಲಾಗಿದೆ.
ಕೇವಲ ಈ ಮೂವರು ನಾಯಕರು ಮಾತ್ರವಲ್ಲದೇ ಕೇಂದ್ರ ಸಚಿವ ಜೆಪಿ ನಡ್ಡಾ, ಪಕ್ಷದ ಕಾರ್ಯದರ್ಶಿ ಸರೋಜ್ ಪಾಂಡೆ ಅವರೂ ಕೂಡ ಕಾರ್ಯಕರ್ತರ ಹಿರಿಯ ನಾಯಕರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಈ ನಾಯಕರು  ಹಿಮಾಚಲ ಪ್ರದೇಶದ ನೂತನ ಸಿಎಂ ಮತ್ತು ಸಂಪುಟ ಸಚಿವರನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ. 
ಇನ್ನು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಹಿಮಾಚಲ ಪ್ರದೇಶಕ್ಕೆ ವೀಕ್ಷಕರಾಗಿ ತೆರಳಲಿದ್ದು, ಉಭಯ ನಾಯಕರು ಪಕ್ಷದ ಶಾಸಕರನ್ನು  ಭೇಟಿ ಮಾಡಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ.
ಇನ್ನು ಹಿಮಾಚಲ ಪ್ರದೇಶ ಸಿಎಂ ರೇಸ್ ನಲ್ಲಿ ಪ್ರಭಾವಿ ಮುಖಂಡರ ಹೆಸರುಗಳೇ ಕೇಳಿಬರುತ್ತಿದ್ದು, ಪ್ರಮುಖವಾಗಿ ಜೈರಾಮ್ ಠಾಕೂರ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com