35 ಮಂದಿಯ ಪೈಕಿ ರಕ್ಷಣೆಗೊಳಗಾಗಿರುವ ಪಂಜಾಬ್ ಮೂಲಕ ಅಮನ್ದೀಪ್ ಮತ್ತು ಬುತಾ ಸಿಂಗ್ ಎಂಬುವವರು ಮಾತನಾಡಿ, 2015ರಲ್ಲಿ ನಾವು ಸೌದಿ ಅರೇಬಿಯಾಗೆ ಹೋಗಿದ್ದವು. ಯುನೈಟೆಡ್ ಇಂಜಿನಿಯರಿಂಗ್ ಕಸ್ಟ್ರಕ್ಷನ್ಸ್ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು. ಸೌದಿಗೆ ಹೋದ ಬಳಿಕ ನಮ್ಮ ಬಳಿ ಇದ್ದ ಪಾಸ್'ಪೋರ್ಟ್'ನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿತ್ತು. ನಾವು ಮಾಡುತ್ತಿದ್ದ ಕೆಲಸಕ್ಕೆ ಸರಿಯಾಗಿ ವೇತನವನ್ನು ನೀಡುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.