ರಜನಿ ರಾಜಕೀಯ ಪ್ರವೇಶ ಇದೀಗ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಿದ್ದು, ಈ ಸಂಬಂಧ ರಜನಿಕಾಂತ್ ಅವರ ಸಮಕಾಲೀನ ನಟ ಮತ್ತೋರ್ವ ಸೂಪರ್ ಸ್ಟಾರ್ ಕಮಲ್ ಹಾಸನ್ ರಜನಿ ರಾಜಕೀಯ ಪ್ರವೇಶ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. "ರಜನಿಕಾಂತ್ ರಾಜಕೀಯ ಪ್ರವೇಶ ಖುಷಿ ತಂದಿದೆ. ಸಹೋದರ ರಜನಿಕಾಂತ್ ಅವರ ಸಾಮಾಜಿಕ ಪ್ರಜ್ಞೆಯನ್ನು ನಾನು ಬಲ್ಲೆ. ಹೀಗಾಗಿ ಅವರಿಗೆ ನಾನು ಶುಭ ಕೋರುತ್ತೇನೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.