ಪುಲ್ವಾಮ ಎನ್ ಕೌಂಟರ್: ಮೂವರು ಉಗ್ರರ ಹತ್ಯೆ, 4 ಸೈನಿಕರು ಹುತಾತ್ಮ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮದಲ್ಲಿ ಭಾನುವಾರ ನಡೆದಿರುವ ದಾಳಿಯಲ್ಲಿ ಈ ವರೆಗೂ 4 ಸೈನಿಕರು ಹುತಾತ್ಮರಾಗಿದ್ದು, ಸೈನಿಕರ ಗುಂಡಿಗೆ ಮೂವರು ಉಗ್ರರು ಹತರಾಗಿದ್ದಾರೆ.
ಪುಲ್ವಾಮ ಎನ್ ಕೌಂಟರ್
ಪುಲ್ವಾಮ ಎನ್ ಕೌಂಟರ್
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪುಲ್ವಾಮದಲ್ಲಿ ಭಾನುವಾರ ನಡೆದಿರುವ ದಾಳಿಯಲ್ಲಿ ಈ ವರೆಗೂ 4 ಸೈನಿಕರು ಹುತಾತ್ಮರಾಗಿದ್ದು, ಸೈನಿಕರ ಗುಂಡಿಗೆ ಮೂವರು ಉಗ್ರರು  ಹತರಾಗಿದ್ದಾರೆ.
ಕಾಶ್ಮೀರದ ಪುಲ್ವಾಮ ಜಿಲ್ಲೆಯ ಲೆಥ್ ಪೋರಾದ ಸಿಆರ್ ಪಿಎಫ್ ನ 185ನೇ ಬೆಟಾಲಿಯನ್ ಕ್ಯಾಂಪ್ ಮೇಲೆ ಉಗ್ರರು ನಿನ್ನೆ ತಡರಾತ್ರಿ 2 ಗಂಟೆ ಸುಮಾರಿನಲ್ಲಿ ದಾಳಿ ನಡೆಸಿದ್ದರು. ಭಾರತೀಯ ಸೈನಿಕರ ಮೇಲೆ ಮನಸೋ ಇಚ್ಛೆ  ಗುಂಡಿನ ಸುರಿಮಳೆಗರೆದ ಉಗ್ರರು ಅಲ್ಲಿಯೇ ಅಡಗಿ ದಾಳಿ ನಡೆಸಿದ್ದಾರೆ. ಕೂಡಲೇ ಸೇನೆ ಉಗ್ರರ ವಿರುದ್ಧ ಉಗ್ರ ನಿಗ್ರಹ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಈ ವರೆಗೂ ನಾಲ್ಕು ಮಂದಿ  ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಕಾರ್ಯಾಚರಣೆಯಲ್ಲಿ ಪ್ರಸ್ತುತ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದ್ದು, ಅವಿತಿರುವ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಅರಂಭಿಸಲಾಗಿದೆ. ಅಂತೆಯೇ ಘಟನಾ ಸ್ಥಳದಲ್ಲಿ ಮತ್ತಷ್ಚು ಉಗ್ರರು  ಅವಿತಿರುವ ಸಾಧ್ಯತೆ ಇದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com