ಇನ್ನು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಜನಿಕಾಂತ್, ಕಳೆದ ಒಂದು ವರ್ಷದಿಂದ ತಮಿಳುನಾಡು ಜನತೆ ಅತ್ಯಂತ ಕೆಟ್ಟ ರಾಜಕೀಯವನ್ನು ನೋಡಿದ್ದಾರೆ. ಕಳೆದೊಂದು ವರ್ಷಗಳ ಬೆಳವಣಿಗೆಯಿಂದ ಜನ ರೋಸಿಹೋಗಿದ್ದಾರೆ. ರಾಜ್ಯದಲ್ಲಿ ರಾಜಕೀಯ ಭ್ರಷ್ಟಾಚಾರವನ್ನು ತಡೆಯಬೇಕಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಗಂಭೀರ ಸ್ಥಿತಿಯಲ್ಲಿದ್ದು, ಪ್ರಜಾಪ್ರುಭತ್ವವನ್ನು ಉಳಿಸಬೇಕಿದೆ. ಜಾತಿ ಮತ ಭೇದವಿಲ್ಲದ ಎಲ್ಲರನ್ನೂ ಸಮಾನವಾಗಿ ಕಾಣುವ ಪಕ್ಷ ತಮ್ಮದು. ನನ್ನ ಪಕ್ಷದಲ್ಲಿ ಅಕ್ಷರಸ್ಥರು, ಅನಕ್ಷರಸ್ಥರು ಎಲ್ಲರೂ ಇರುತ್ತಾರೆ ಎಂದು ಹೇಳಿದರು.