ಪಂಜಾಬ್: ಚುನಾವಣೆಗೆ ಸ್ಪರ್ಧಿಸಿದ್ದ 300 ಅಭ್ಯರ್ಥಿಗಳಿಗೆ ಐಟಿ ನೊಟೀಸ್!

ಪಂಜಾಬ್ ವಿಧಾನಸಭಾ ಚುನಾವಣೆಗೆ ನಡೆದಿದ್ದ ಮತದಾನ ಫೆ.4 ರಂದು ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಚುನಾವಣೆಗೆ ಸ್ಪರ್ಧಿಸಿದ್ದ 300 ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿದೆ.
ಚುನಾವಣೆಗೆ ಸ್ಪರ್ಧಿಸಿದ್ದ 300 ಅಭ್ಯರ್ಥಿಗಳಿಗೆ ಐಟಿ ನೊಟೀಸ್!
ಚುನಾವಣೆಗೆ ಸ್ಪರ್ಧಿಸಿದ್ದ 300 ಅಭ್ಯರ್ಥಿಗಳಿಗೆ ಐಟಿ ನೊಟೀಸ್!
Updated on
ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ನಡೆದಿದ್ದ ಮತದಾನ ಫೆ.4 ರಂದು ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಚುನಾವಣೆಗೆ ಸ್ಪರ್ಧಿಸಿದ್ದ 300 ಅಭ್ಯರ್ಥಿಗಳಿಗೆ ಆದಾಯ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿದೆ. 
ಆದಾಯದ ಮೂಲಕ್ಕೆ ದಾಖಲೆ ಒದಗಿಸುವುದು ಸೇರಿದಂತೆ ವಿವಿಧ ಮಾಹಿತಿಗಳನ್ನು ಕೇಳಿರುವ ಆದಾಯ ತೆರಿಗೆ ಇಲಾಖೆ, ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದ ಆದಾಯ ಮೂಲಗಳನ್ನು ತಿಳಿಸಬೇಕೆಂದು ಹೇಳಿದೆ. 
ಕಳೆದ 5 ವರ್ಷಗಳಲ್ಲಿ ತಮ್ಮ ಹಾಗೂ ತಮ್ಮ ಪತ್ನಿಯ ಆದಾಯ, ಆಸ್ತಿಯ ಪ್ರಮಾಣ ಹೆಚ್ಚು-ಕಡಿಮೆಯಾಗಿದ್ದರೆ, ಕಾರಣ, ವಿವರಣೆಗಳ ಸಹಿತ ಮಾಹಿತಿ ನೀಡಬೇಕೆಂದು ಆದಾಯ ತೆರಿಗೆ ಇಲಾಖೆ 300 ಅಭ್ಯರ್ಥಿಗಳಿಗೆ ನೊಟೀಸ್ ನಲ್ಲಿ ತಿಳಿಸಿದೆ. ಐಟಿಯ ಈ ನಡೆಯ ಬಗ್ಗೆ ಅಭ್ಯರ್ಥಿಗಳು ಪಂಜಾಬ್ ನ ಮುಖ್ಯ ಚುನಾವಣಾಧಿಕಾರಿ ವಿಕೆ ಸಿಂಗ್ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಫೆ.25 ರೊಳಗೆ ಎಲ್ಲಾ ಮಾಹಿತಿಗಳನ್ನು ವಿವರವಾಗಿ ನೀಡುವಂತೆ ಆದಾಯ ತೆರಿಗೆ ಇಲಾಖೆ 300 ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. 
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ಎನ್ ಜಿಒ ನಡೆಸಿದ್ದ ಅಧ್ಯಯನದ ಪ್ರಕಾರ ಶಿರೋಮಣಿ ಅಕಾಲಿ ದಳ ಕಣಕ್ಕಿಳಿಸಿದ್ದ ಅಭ್ಯರ್ಥಿಗಳ ಪೈಕಿ ಶೇ.93 ಅಭ್ಯರ್ಥಿಗಳು 1 ಕೋಟಿ ರೂಪಾಯಿಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಅಂತೆಯೇ ಕಾಂಗ್ರೆಸ್ ನ ಶೇ.87, ಬಿಜೆಪಿಯ ಶೇ.63, ಆಮ್ ಆದ್ಮಿ ಪಕ್ಷದ ಶೇ.31 ರಷ್ಟು ಹಾಗೂ ಪಕ್ಷೇತ್ರರ ಅಭ್ಯರ್ಥಿಗಳಲ್ಲಿ ಶೇ.23 ರಷ್ಟು ಅಭ್ಯರ್ಥಿಗಳು ಕರೋಡ್ ಪತಿಗಳಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com