ಬೋಯಿಂಗ್ ಕಾರ್ಗೋ ಡೋರ್ ಗಳ ಪೂರೈಕೆಗೆ ಹೆಚ್ಎಎಲ್ ಗೆ ಇಸ್ರೇಲ್ ನಿಂದ ಬೇಡಿಕೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ-2017 ರಲ್ಲಿ ಇಸ್ರೇಸ್ ನೊಂದಿಗೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಬೋಯಿಂಗ್ ವಿಮಾನಕ್ಕೆ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ.
ಇಸ್ರೇಲ್ ಏರೋ ಸ್ಪೇಸ್ ಇಂಡಸ್ಟ್ರೀಸ್ ನೊಂದಿಗೆ ಹೆಚ್ಎಎಲ್ ಒಪ್ಪಂದ
ಇಸ್ರೇಲ್ ಏರೋ ಸ್ಪೇಸ್ ಇಂಡಸ್ಟ್ರೀಸ್ ನೊಂದಿಗೆ ಹೆಚ್ಎಎಲ್ ಒಪ್ಪಂದ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಶೋ-2017 ರಲ್ಲಿ ಇಸ್ರೇಸ್ ನೊಂದಿಗೆ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ಬೋಯಿಂಗ್ ವಿಮಾನಕ್ಕೆ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡುವ ಒಪ್ಪಂದ ಮಾಡಿಕೊಂಡಿದೆ. 
ಬೋಯಿಂದ್ 737 ಮೇನ್ ಡೆಕ್ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡಲು ಇಸ್ರೇಲ್ ಏರೋ ಸ್ಪೇಸ್ ಇಂಡಸ್ಟ್ರೀಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 8 ಸೆಟ್ ಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೆಚ್ಎಎಲ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಹೆಚ್ಎಎಲ್ ಈಗಾಗಲೇ 30 ಕ್ಕೂ ಹೆಚ್ಚು ಕಾರ್ಗೋ ಡೋರ್ ಗಳನ್ನು ಇಸ್ರೇಲ್ ಗೆ ಪೂರೈಕೆ ಮಾಡಿದ್ದು, ಈಗ ಮತ್ತೊಮ್ಮೆ 8 ಸೆಟ್ ಗಳ ಡೋರ್ ಗಳನ್ನು ಪೂರೈಕೆ ಮಾಡಲಿದೆ. 
ಗುಣಮಟ್ಟ ಹಾಗೂ ನಿಗದಿತ ವೇಳೆಯಲ್ಲಿ ಈ ಹಿಂದೆ ಕಾರ್ಗೋ ಡೋರ್ ಗಳನ್ನು ಪೂರೈಕೆ ಮಾಡಲಾಗಿತ್ತು. ಇದನ್ನು ಪರಿಗಣಿಸಿ ಐಎಐ ಮತ್ತಷ್ಟು ಕಾರ್ಗೋ ಡೋರ್ ಗಳನ್ನು ಪೂರೈಸಲು ಬೇಡಿಕೆ ಇಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com