ಪ್ರಕಾಶ್ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರಕಾಶ್ ಉತ್ಸವವನ್ನು ಆಯೋಜಿಸಿರುವ ಬಿಹಾರದ ಸಿಎಂ ನಿತೀಶ್ ಕುಮಾರ್, ಬಿಹಾರದ ಜನತೆ ಅಭಿನಂದನಾರ್ಹರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಹಾರವನ್ನು ಮದ್ಯಮುಕ್ತವಾಗಿಸುವುದಕ್ಕೆ ನಿತೀಶ್ ಕುಮಾರ್ ಮದ್ಯ ನಿಷೇಧ ಕ್ರಮ ಕೈಗೊಂಡಿರುವುದು ದಿಟ್ಟ ನಿರ್ಧಾರವಾಗಿದೆ. ಸಾಮಾಜಿಕ ಬದಲಾವಣೆಗಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಸವಾಲಿನ ಸಂಗತಿಯಾಗಿದೆ. ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ಅಂತಹ ನಿರ್ಧಾರ ಕೈಗೊಂಡಿದ್ದಾರೆ ಪಕ್ಷಾತೀತವಾಗಿ ಎಲ್ಲರೂ ಸ್ವಾಗತಿಸಬೇಕೆಂದು ಕರೆ ನೀಡಿದ್ದಾರೆ.