2 ಸಾವಿರ ರು.ಗೆ ನವಜಾತ ಶಿಶು ಮಾರಾಟ ಮಾಡಿದ ಮಹಿಳೆ

ಕಿತ್ತು ತಿನ್ನುವ ಬಡತನದಿಂದಾಗಿ ಮಹಿಳೆಯೊಬ್ಬಳು ನವಜಾತ ಶಿಶುವನ್ನು 2 ಸಾವಿರ ರುಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಸಾದ ಬಮರಾಡಿಯಪಟ್ಟಣದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೆಂದರಾಪರಾ: ಕಿತ್ತು ತಿನ್ನುವ ಬಡತನದಿಂದಾಗಿ ಮಹಿಳೆಯೊಬ್ಬಳು ನವಜಾತ ಶಿಶುವನ್ನು 2 ಸಾವಿರ ರುಪಾಯಿಗೆ ಮಾರಾಟ ಮಾಡಿರುವ ಘಟನೆ ಒಡಿಸಾದ ಬಮರಾಡಿಯಪಟ್ಟಣದ ಕೆಂದಾರಾಪಾರದಲ್ಲಿ ನಡೆದಿದೆ.

ಗೀತಾಮೂರ್ಮು ಎಂಬಾಕೆ ಭಾನವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಸೋಮವಾರ ಬೆಳಗ್ಗೆ ತನ್ನ ಮಗುವನ್ನು ಅದೇ ಗ್ರಾಮದ ಮನೋಜ್ ಸಾಹು ಮತ್ತು ಮಮತಾ ಎಂಬ ದಂಪತಿಗೆ ಮಾರಾಟ ಮಾಡಿದ್ದಾಳೆ, ಗೀತಾಳಿಗೆ ಈ ಮೊದಲು 12 ವರ್ಷದ ಬಾಲಕಿ ಹಾಗೂ 10 ವರ್ಷದ ಬಾಲಕನಿದ್ದಾನೆ, ಆರು ತಿಂಗಳ ಹಿಂದೆ ಗೀತಾ ಪತಿ ಮನೆ ಬಿಟ್ಟು ಓಡಿ ಹೋಗಿದ್ದು ಜೀವನ ನಿರ್ವಹಿಸಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಗೀತಾ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಿದ್ದಾಳೆ.

ನವಜಾತ ಶಿಶು ಮಮತಾ ಮಡಿಲಲ್ಲಿದ್ದದ್ದನ್ನು ಗಮನಿಸಿದ ಗ್ರಾಮಸ್ಥರು ವಿಚಾರಣೆ ನಡೆಸಿದಾಗ ಮಮತಾ 2 ಸಾವಿರ ರು ನೀಡಿ ಖರೀದಿಸಿದ್ದಾಗಿ ತಿಳಿಸಿದ್ದಾಳೆ. ಈ ವಿಷಯವನ್ನು ಗ್ರಾಮಸ್ಥರು ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಿಗೆ ತಿಳಿಸಿದ್ದಾರೆ.ನಂತರ ಮಗುವನ್ನು  ಅಧಿಕಾರಿಗಳು ತಾಯಿ ಬಳಿಗೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com