ಜಲ್ಲಿಕಟ್ಟು ವಿವಾದ: ಸಂವಿಧಾನದ ವಿರುದ್ದ ನಡೆಯುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು- ಸ್ವಾಮಿ

ಜಲ್ಲಿಕಟ್ಟು ನಿಷೇಧಕ್ಕೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದು, ಸಂವಿಧಾನದ ವಿರುದ್ದ ನಡೆಯವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶನಿವಾರ ಹೇಳಿದ್ದಾರೆ...
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
Updated on: 

ನವದೆಹಲಿ: ಜಲ್ಲಿಕಟ್ಟು ನಿಷೇಧಕ್ಕೆ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಬೆಂಬಲ ವ್ಯಕ್ತಪಡಿಸಿದ್ದು, ಸಂವಿಧಾನದ ವಿರುದ್ದ ನಡೆಯವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶನಿವಾರ ಹೇಳಿದ್ದಾರೆ.

ಜಲ್ಲಿಕಟ್ಟು ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಕುಗ್ರಾಮಗಳಲ್ಲಿ ಕೆಲವೆಡೆ ಈಗಲೂ ಗೂಳಿಗಳನ್ನು ಬಿಟ್ಟು ಆಟವಾಡುತ್ತಿದ್ದಾರೆ. ಆದರೆ, ಇದು ಜಲ್ಲಿಕಟ್ಟು ಕ್ರೀಡೆಯಲ್ಲ. ಮಧುರೈ, ಕಡಲೂರು ಮತ್ತು ಇನ್ನಿತರೆ ಪ್ರದೇಶಗಳಲ್ಲಿ ನಡೆಸಲಾಗಿರುವ ನಿಜವಾಕ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಕಡಿವಾಣ ಹಾಕಿದೆ. ಇದು ನಿಜಕ್ಕೂ ಉತ್ತಮವಾದ ಬೆಳವಣಿಗೆಯಾಗಿದೆ. ತಮಿಳುನಾಡಿನಲ್ಲಿ ರಾಷ್ಟ್ರವಿರೋಧಿ ಚಟುವಟಿಗೆಗಳು ನಡೆಯುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಜಲ್ಲಿಕಟ್ಟು ಕುರಿತಂತೆ ಸುಪ್ರೀಂಕೋರ್ಟ್ ಆದೇಶ ನೀಡುವವರೆಗೂ ಕಾಯಲೇಬೇಕಿದೆ. ಎಲ್'ಟಿಟಿ, ನಕ್ಸಲರು ಮತ್ತು ಡ್ರಗ್ ಮಾಪಿಯಾದ ಗ್ಯಾಂಗ್ ಗಳು ಕೈಜೋಡಿಸಿದ್ದು, ಭಾರತೀಯ ಸಂವಿಧಾನದವನ್ನು ವಿವಾದಕ್ಕೀಡಾಗುವಂತೆ ಮಾಡುತ್ತಿದ್ದಾರೆ. ಇಂತಹ ಬೆಳವಣಿಗೆಗಳನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿ ಕ್ರೀಡೆಗೆ ಕಡಿವಾಣ ಹಾಕಿರುವ ತಮಿಳುನಾಡು ಸರ್ಕಾರ ಬಗ್ಗೆ ನನಗೆ ಸಂಸತವಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com