

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಎನ್ ಕೌಂಟರ್ ನಡೆಸಿದ್ದು, ಓರ್ವ ಉಗ್ರನನ್ನು ಹೊಡೆದುರುಳಿಸಿರುವುದಾಗಿ ಗುರುವಾರ ತಿಳಿದುಬಂದಿದೆ.
ಅನಂತ್ ನಾಗ್ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಸೇನೆ ಎನ್ ಕೌಂಟರ್ ನಡೆಸಿ, ಮೂವರು ಉಗ್ರರನ್ನು ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು ಬಂಡಿಪೋರಾದ ಹಜಿನ್ ಪ್ರದೇಶದಲ್ಲಿ ಅಡಗಿ ಕುಳಿತಿದ್ದ ಲಷ್ಕರ್-ಇ-ತೊಯ್ಬಾ ಭಯೋತ್ಪಾದನಾ ಸಂಘಟನೆಯ ಓರ್ವ ಉಗ್ರನನ್ನು ಹೊಡೆದುರುಳಿಸಿದೆ.
ಜನವರಿ 6 ರಂದೂ ಕೂಡ ಸೇನೆ ಜಮ್ಮು ಕಾಶ್ಮೀರದ ಬುದ್ಗಮ್ ಜಿಲ್ಲೆ ಮಚು ಪ್ರದೇಶದಲ್ಲಿ ಎನ್ ಕೌಂಟನ್ ನಡೆಸಿತ್ತು. ಈ ವೇಳೆ ನಿಷೇಧಿತ ಅಲ್-ಬದರ್ ಉಗ್ರ ಸಂಘಟನೆಯ ಭಯೋತ್ಪಾದಕ ಮುಜಫರ್ ಅಹಮದ್ ನನ್ನು ಹತ್ಯೆ ಮಾಡಿತ್ತು.