ದೆಹಲಿ: ಜೆಎನ್'ಯು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

21 ವರ್ಷದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಯನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯೊಂದಹು ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 21 ವರ್ಷದ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಯನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯೊಂದಹು ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.

ಜೆಎನ್ ಯು ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಬಿಎ ಪದವಿ ಮಾಡುತ್ತಿರುವ ವಿದ್ಯಾರ್ಥಿನಿ ತನ್ನ ಇಬ್ಬರು ಗೆಳೆಯರೊಂದಿಗೆ ಪಬ್ ವೊಂದಕ್ಕೆ ಹೋಗಿದ್ದಾಳೆ. ನಂತರ ವಿರ್ದಾರ್ಥಿಯ ಗೆಳೆಯ ಸಲೀಮ್ ಎಂಬಾತ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ.

ಆ ವೇಳೆ ಸಲೀಮ್ ಮನೆಯಲ್ಲಿ ಸುಲೈಮನ್, ಸಿದ್ಧಾಂತ್ ಮತ್ತು ಪ್ರತ್ಯೂಷಾ ಮೂವರು ಗೆಳಯರು ಬಂದಿದ್ದಾರೆ. ನಂತರ ಗೆಳೆಯನೊಬ್ಬ ಆಕೆಯನ್ನು ಜೆಎನ್ ಯು ಆವರಣದ ಬಳಿ ಬಿಟ್ಟು ಬಂದಿದ್ದಾನೆ. ಇದಾದ ಕೆಲವೇ ಗಂಟೆಗಳಲ್ಲಿ ಮತ್ತೆ ವಿದ್ಯಾರ್ಥಿನಿ ಸಲೀಮ್ ಮನೆಗೆ ಹೋಗಿದ್ದಾಳೆ. ನಂತರ ವಿದ್ಯಾರ್ಥಿನಿ, ಸಲೀಮ್ ಮತ್ತು ಸುಲೈಮನ್ ಮೂವರು ಮದ್ಯಪಾನ ಮಾಡಿದ್ದಾರೆ. ಪ್ರಜ್ಞಾಹೀನಳಾಗಿದ್ದ ವಿದ್ಯಾರ್ಥಿನಿ ಮೇಲೆ ಸಲೀಮ್ ಮತ್ತು ಸುಲೈಮನ್ ಸಾಮೂಹಿಕವಾಗಿ ಅತ್ಯಚಾರ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮರುದಿನ ಬೆಳಿಗ್ಗೆ ಪ್ರಜ್ಞೆ ಬಂದ ನಂತರ ವಿದ್ಯಾರ್ಥಿನಿಗೆ ರಾತ್ರಿ ನಡೆದ ಘಟನೆ ಬಗ್ಗೆ ನೆನಪಾಗಿದೆ. ನಂತರ ಕಾಲೇಜಿನ ಹಾಸ್ಟೆಲ್ ಗೆ ಹೋಗಿ ತನ್ನ ಸ್ನೇಹಿತರೊಂದಿಗೆ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಆಕೆಗೆ ಧೈರ್ಯ ಹೇಳಿದ ಸ್ನೇಹಿತರು ಆಕೆಯನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಸ್ತುತ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಸಲೀಮ್ ಮತ್ತು ಸುಲೈಮನ್ ನ್ನು ಬಂಧನಕ್ಕೊಳಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com