ಸಂಸತ್ತಿನಲ್ಲಿ ಫಲಪ್ರದ ಚರ್ಚೆಯಲ್ಲಿ ತೊಡಗಿಸಿಕೊಳ್ಳಿ: ಟಿಎಂಸಿಗೆ ಬಿಜೆಪಿ ಕೋರಿಕೆ

ಸಂಸತ್ತಿನ ಮೊದಲ ಎರಡು ದಿನಗಳ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ತೃಣಮೂಲ ಕಾಂಗ್ರೆಸ್...
ಶೈನಾ ಎನ್ ಸಿ
ಶೈನಾ ಎನ್ ಸಿ
Updated on: 
ಮುಂಬೈ: ಸಂಸತ್ತಿನ ಮೊದಲ ಎರಡು ದಿನಗಳ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ತೃಣಮೂಲ ಕಾಂಗ್ರೆಸ್ ತೀರ್ಮಾನಿಸಿದ್ದು, ಸರ್ಕಾರದ ನೋಟು ಅಮಾನ್ಯತೆ ಬಗ್ಗೆ ವಿರೋಧವಿದ್ದರೂ ಕೂಡ ಪಕ್ಷವನ್ನು ಮೀರಿ ನಿಂತು ಸಂಸತ್ತಿನಲ್ಲಿ ಫಲಪ್ರದಾಯಕ ಚರ್ಚೆಯಲ್ಲಿ ತೊಡಗಬೇಕೆಂದು  ಬಿಜೆಪಿ ಹೇಳಿದೆ.
ಸಂಸತ್ತು ಹೊರಗೆ ಆಧಾರರಹಿತ ನಡೆಯ ಮೂಲಕ ಪ್ರತಿಭಟನೆ ಮಾಡಿ ಟಿಎಂಸಿ ದೇಶದ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಿದೆ ಎಂದು ಬಿಜೆಪಿ ನಾಯಕಿ ಶೈನಾ ಎನ್ ಸಿ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.
ನೋಟುಗಳ ನಿಷೇಧದ ನಂತರ ಟಿಎಂಸಿ ನಾಯಕರು ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ.  ಅವರಿಗೆ ಸಮಸ್ಯೆಯಿದ್ದರೆ  ಸಂಸತ್ತಿನಲ್ಲಿ ಚರ್ಚೆ ನಡೆಸಲಿ  ಎಂದು ಅಭಿಪ್ರಾಯಪಟ್ಟರು.
ಸಂಸತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನೋಟುಗಳ ನಿಷೇಧ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಮತ್ತು ಬ್ಯಾಂಕುಗಳಿಂದ ಹಣ ಹಿಂತೆಗೆಯುವ ಮಿತಿ ಈಗಲೂ ಇದೆ ಎಂದು ಆರೋಪಿಸಿ ಟಿಎಂಸಿ ಪ್ರತಿಭಟನೆ ನಡೆಸುತ್ತಿದೆ. ಎರಡು ದಿನಗಳವರೆಗೆ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ನಿನ್ನೆ ಟಿಎಂಸಿ ಹೇಳಿಕೆಯಲ್ಲಿ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com