ಸಿರಿಯಾದಲ್ಲಿ ಬಾಂಬ್ ಸ್ಫೋಟ: 12 ಸಾವು

ಸಿರಿಯಾ ರಾಜಧಾನಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 12 ಜನರು ಸಾವನ್ನಪ್ಪಿದ್ದರೆ 15 ಜನರು ಗಾಯಗೊಂಡಿದ್ದಾರೆ.
ಬಾಂಬ್ ಸ್ಫೋಟ
ಬಾಂಬ್ ಸ್ಫೋಟ
ಡಮಾಸ್ಕಸ್: ಸಿರಿಯಾ ರಾಜಧಾನಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 12 ಜನರು ಸಾವನ್ನಪ್ಪಿದ್ದರೆ 15 ಜನರು ಗಾಯಗೊಂಡಿದ್ದಾರೆ. 
ತಹ್ರೀರ್ ಸ್ಕ್ವೇರ್ ಬಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಪೊಲೀಸರು ಮೂರು ಕಾರ್ ಬಾಂಬ್ ಗಳನ್ನು ಬೆನ್ನಟ್ಟಿದ್ದಾಗಲೇ ಸ್ಫೋಟ ಸಂಭವಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆಗಳು ವರದಿ ಪ್ರಕಟಿಸಿವೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಎರಡು ಕಾರ್ ಬಾಂಬ್ ಗಳನ್ನು ಸ್ಫೋಟಗೊಳ್ಳುವುದರಿಂದ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ. ಆದರೆ ಮೂರನೇ ಬಾಂಬ್ ಸ್ಫೋಟಗೊಂಡಿದ್ದು, 12 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 
ಕಾರ್ ಗಳನ್ನು ಸ್ಫೋಟಿಸಿರುವ ಘಟನೆಗೆ ಭಯೋತ್ಪಾದಕ ಸಂಘಟನೆಗಳು ಹೊಣೆ ಹೊತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com