ಜಾರ್ಖಾಂಡ್: 7 ಜೀವಂತ ಗ್ರೆನೇಡ್'ಗಳನ್ನು ವಶಕ್ಕೆ ಪಡೆದ ಭದ್ರತಾ ಪಡೆ

ಜಾರ್ಖಾಂಡ್ ನ ಪಲಮೌ ಜಿಲ್ಲೆಯ ಕರಿಮಟಿ ಘಾಟಿ ಬಳಿ 7 ಜೀವಂತ ಗ್ರೆನೇಡ್ ಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮೇದಿನಿನಗರ್: ಜಾರ್ಖಾಂಡ್ ನ ಪಲಮೌ ಜಿಲ್ಲೆಯ ಕರಿಮಟಿ ಘಾಟಿ ಬಳಿ 7 ಜೀವಂತ ಗ್ರೆನೇಡ್ ಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ. 
ಪಂಕಿ-ಬಾಲುಮಠ್ ರಸ್ತೆಯಲ್ಲಿ ಜೀವಂತ ಗ್ರೆನೇಡ್ ಗಳು ದೊರಕಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಭದ್ರತಾಧಿಕಾರಿಗಳು ಗ್ರೆನೇಡ್ ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. 
ಖಚಿತ ಮಾಹಿತಿ ಆಧಾರದ ಮೇರೆಗೆ ಜಿಲ್ಲಾ ಪೊಲೀಸರು ನಕ್ಸಲ್ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಗ್ರೆನೇಡ್ ಗಳು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಸ್ತುತ ಸ್ಥಳದಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ ಎಂದು ಪಲಮೌ ಎಸ್ ಪಿ ಇಂದ್ರಜೀತ್ ಮೆಹಥಾ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com