ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಮಂಗೇಶ್ ತೆಂಡೂಲ್ಕರ್ ನಿಧನ

ಸಿದ್ಧ ವ್ಯಂಗ್ಯ ಚಿತ್ರಕಾರ ಹಾಗೂ ಲೇಖಕ ಮಂಗೇಶ್ ತೆಂಡೂಲ್ಕರ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು...
ಮಂಗೇಶ್ ತೆಂಡೂಲ್ಕರ್
ಮಂಗೇಶ್ ತೆಂಡೂಲ್ಕರ್
Updated on: 
ಪುಣೆ: ಪ್ರಸಿದ್ಧ ವ್ಯಂಗ್ಯ ಚಿತ್ರಕಾರ ಹಾಗೂ ಲೇಖಕ ಮಂಗೇಶ್ ತೆಂಡೂಲ್ಕರ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
82 ವರ್ಷದ ಮಂಗೇಶ್ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬ್ಲಾಡರ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಮಂಗೇಶ್ ಅವರು ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ತಮ್ಮ ಅಂತಿಮ ದಿನದವರೆಗೂ ಮಂಗೇಶ್ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಕಳೆದ ತಿಂಗಳು ಅವರ ವ್ಯಂಗ್ಯ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. 
ದೈನಂದಿನ ಜೀವನದ ಹಲವು ವಿಷಯಗಳನ್ನಿರಕಿಸಿಕೊಂಡು ಮಂಗೇಶ್ ವ್ಯಂಗ್ಯ ಚಿತ್ರ ಬರೆಯುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಕಳಕಳಿಯುಳ್ಳ ಟ್ರಾಫಿಕ್ ಸಮಸ್ಯೆಳಂತ ವಿಷಯವನ್ನಾಧರಿಸಿ ವ್ಯಂಗ್ಯ ಚಿತ್ರ ರಚಿಸುತ್ತಿದ್ದರು.
ವ್ಯಂಗ್ಯ ಚಿತ್ರದ ಜೊತೆಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಹಲವು ನಿಯತ ಕಾಲಿಕೆಗಳು ಮತ್ತು ಪತ್ರಿಕೆಗಳಿಗೆ ಬರೆಯುತ್ತಿದ್ದರು. ಇಂದೇ ಅವರ ಅಂತ್ಯ ಸಂಸ್ಕಾರ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com