ಜರ್ಮನ್ ಮೂಲದ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗ ಪಡೆಯಲಾಗಿತ್ತು: ದೆಹಲಿ ಮೂಲದ ಸಂಸ್ಥೆಯಿಂದ ಸ್ಪಷ್ಟನೆ

ಭಾರಿ ವಿವಾದಕ್ಕೆ ಗ್ರಾಸವಾಗಿರುವ ಬೋಫೋರ್ಸ್ ಆರ್ಟಿಲರಿ ಗನ್ ಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಜರ್ಮನ್ ಮೂಲದ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗ ಪಡೆಯಲಾಗಿತ್ತು ಎಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ನವದೆಹಲಿ: ಭಾರಿ ವಿವಾದಕ್ಕೆ ಗ್ರಾಸವಾಗಿರುವ ಬೋಫೋರ್ಸ್ ಆರ್ಟಿಲರಿ ಗನ್ ಗೆ ಚೀನಾದ ಕಳಪೆ ಗುಣಮಟ್ಟದ ಬಿಡಿಭಾಗ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಜರ್ಮನ್  ಮೂಲದ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗ ಪಡೆಯಲಾಗಿತ್ತು ಎಂದು ಹೇಳಿದೆ.

ಬೋಫೋರ್ಸ್ ಗನ್ ತಯಾರಿಕೆಯಲ್ಲಿ ಸಂಸ್ಥೆಯ ವತಿಯಿಂದ ಯಾವುದೇ ಆಕ್ರಮವಾಗಿಲ್ಲ. ತಮ್ಮ ಸಂಸ್ಥೆ ಜರ್ಮನ್ ಮೂಲದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಗನ್ ಗೆ ಬಿಡಿಭಾಗಗಳನ್ನು ತರಿಸಿಕೊಳ್ಳುತ್ತಿತ್ತು. ಈ ಬಗ್ಗೆ  ಜರ್ಮನ್ ಮೂಲದ ಸಂಸ್ಥೆಯಿಂದ ಪ್ರಮಾಣ ಪತ್ರ ಕೂಡ ಪಡೆಯಲಾಗಿದೆ ಎಂದು ಸಂಸ್ಥೆ ಸ್ಪಷ್ಟನೆ ನೀಡಿದೆ. ಜರ್ಮನ್ ಮೂಲದ ಸಿಆರ್ಬಿ ಆಂಟ್ರಿಬ್ ಸ್ಟೆಕ್ನಿಕ್ ಸಂಸ್ಥೆಯಿಂದ ಬೋಫೋರ್ಸ್ ಬಿಡಿಭಾಗಗಳನ್ನು ಪಡೆದಿದ್ದು, ಇದಕ್ಕೆ ಸಂಸ್ಥೆ  ಪ್ರಮಾಣ ಪತ್ರ ಕೂಡ ನೀಡಿತ್ತು ಎಂದು ಹೇಳಿದೆ.

ಆದರೆ ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿರುವ ಅಂಶಗಳಂತೆ ದೆಹಲಿ ಮೂಲದ ಸಂಸ್ಥೆಗೆ ಬಿಡಿಭಾಗಗಳನ್ನು ಪೂರೈಕೆ ಮಾಡುತ್ತಿದ್ದ ಜರ್ಮನ್ ಮೂಲದ ಸಂಸ್ಥೆ ಆ ಬಿಡಿಭಾಗಗಳನ್ನು ತಯಾರಿಸುತ್ತಲೇ ಇರಲಿಲ್ಲವೆಂಬ ಆಘಾತಕಾರಿ  ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂಸ್ಥೆ ನೀಡಿರುವ ದಾಖಲೆಗಳೆಲ್ಲವೂ ನಕಲಾಗಿದ್ದು, ತಿರುಚಿದ ದಾಖಲೆ ಎಂದು ಸಿಬಿಐ ಆರೋಪಿಸಿದೆ. ಹೀಗಾಗಿ ದೆಹಲಿ ಮೂಲದ ಸಂಸ್ಥೆ ಹಾಗೂ ಬಿಡಿಭಾಗ ಪೂರೈಕೆ ಮಾಡುತ್ತಿದ್ದ ಜರ್ಮನ್  ಮೂಲದ ಸಂಸ್ಥೆಗಳ ನಡುವಿನ ಈ ಮೇಲ್ ಮಾಹಿತಿಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com