ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣ ವಚನ ಸ್ವೀಕಾರ

ಬಿಹಾರದ ಮಾಜಿ ರಾಜ್ಯಪಾಲ ಬಿಜೆಪಿಯಿಂದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿರುವ ಮೊದಲ ನೇತಾರ ರಾಮನಾಥ ಕೋವಿಂದ್ ಮಂಗಳವಾರ ದೇಶದ 14ನೇ ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರತಿಜ್ಞಾ ವಿಧಿ ಸ್ವೀಕರಿಸಿದ ರಾಮನಾಥ್ ಕೋವಿಂದ್
ಪ್ರತಿಜ್ಞಾ ವಿಧಿ ಸ್ವೀಕರಿಸಿದ ರಾಮನಾಥ್ ಕೋವಿಂದ್
Updated on: 

ನವದೆಹಲಿ: ಬಿಹಾರದ ಮಾಜಿ ರಾಜ್ಯಪಾಲ ಬಿಜೆಪಿಯಿಂದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿರುವ ಮೊದಲ ನೇತಾರ ರಾಮನಾಥ ಕೋವಿಂದ್ ಮಂಗಳವಾರ ದೇಶದ 14ನೇ  ರಾಷ್ಟ್ರಪತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 12.15ರ ಸಮಯದಲ್ಲಿ ದೇಶದ 14ನೇ ರಾಷ್ಟ್ರಪತಿಯಾಗಿ ಕೋವಿಂದ್ ಪ್ರಮಾಣವಚನ ಸ್ವೀಕರಿಸಿದ್ದು, ಈಶ್ವರನ ಹೆಸರಲ್ಲಿ ಸಂವಿಧಾನ ಬದ್ಧ ಅಧಿಕಾರವನ್ನು ಶ್ರದ್ಧಾಪೂರ್ವಕವಾಗಿ ಮತ್ತು ನಿಷ್ಪಕ್ಷಪಾತವಾಗಿ  ನಿರ್ವಹಣೆ ಮಾಡಲಿದ್ದೇನೆ ಎಂದು ರಾಮನಾಥ್ ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕಾರದ ಬಳಿಕ ಸಂಸತ್ ಆವರಣದ ಹೊರಗೆ ರಕ್ಷಣಾ ಸಿಬ್ಬಂದಿ 21 ಸುತ್ತು ಕುಶಾಲು ತೋಪು ಸಿಡಿಸುವ ಮೂಲಕ ನೂತನ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಕೆ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com