ಬಿಹಾರ ಜನತೆ ನಿತೀಶ್ ಕುಮಾರ್ ಗೆ ತಕ್ಕ ಪಾಠ ಕಲಿಸುತ್ತಾರೆ: ತೇಜಸ್ವಿ ಯಾದವ್

ಬಿಹಾರದಲ್ಲಿ ಮಹಾಘಟ್ ಬಂಧನಕ್ಕೆ ಜನರು ಆದೇಶ ನೀಡಿದ್ದರು. ಆದರೆ ಇಂದು ಆ ಮಹಾಘಟ್ ಬಂಧನಕ್ಕೆ ಬಿಜೆಪಿ...
ಆರ್ ಜೆಡಿ ವಿಶ್ವಾಸ ಮತ ಸೋತ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿ ಯಾದವ್
ಆರ್ ಜೆಡಿ ವಿಶ್ವಾಸ ಮತ ಸೋತ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿ ಯಾದವ್
Updated on: 
ಪಾಟ್ನಾ: ಬಿಹಾರದಲ್ಲಿ ಮಹಾಘಟ್ ಬಂಧನಕ್ಕೆ ಜನರು ಆದೇಶ ನೀಡಿದ್ದರು. ಆದರೆ ಇಂದು ಆ ಮಹಾಘಟ್ ಬಂಧನಕ್ಕೆ ಬಿಜೆಪಿ ಮತ್ತು ನಿತೀಶ್ ಕುಮಾರ್ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ತಮ್ಮ ಪಕ್ಷ ಇಂದು ವಿಶ್ವಾಸ ಮತ ಕಳೆದುಕೊಂಡ ನಂತರ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮೈತ್ರಿಯಿಂದ ಹೊರಬಂದಿರುವ ಜೆಡಿಯುಗೆ ಬಿಹಾರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಸದನದಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದೆ. ಆದರೆ ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರಲ್ಲಿ ಅದಕ್ಕೆ ಉತ್ತರಗಳಿಲ್ಲ. ಸದನದಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲದಿರುವಾಗ ಜನರಿಗೆ ಅವರು ಹೇಗೆ ಉತ್ತರಿಸುತ್ತಾರೆ ಎಂದು ಕೇಳಿದರು.
ಭಾರತೀಯ ಜನತಾ ಪಾರ್ಟಿಯ ಸುಶಿಲ್ ಕುಮಾರ್ ಮೋದಿ ಅವರ ಪಕ್ಕ ಕುಳಿತುಕೊಳ್ಳಲು ನಿತೀಶ್ ಕುಮಾರ್ ಅವರಿಗೆ ನಾಚಿಕೆಯಾಗುವುದಿಲ್ಲವೇ.ಮಹಾತ್ಮಾ ಗಾಂಧಿ ಹತ್ಯೆಗೆ ಸಂಚು ರೂಪಿಸಿದ ಪಕ್ಷದ ಜೊತೆ ನಿತೀಶ್ ಕುಮಾರ್ ಮೈತ್ರಿ ಮಾಡಿಕೊಂಡಿದ್ದಾರೆ. ಅವರಿಗೆ ನಾಚಿಕೆಯಾಗುವುದಿಲ್ಲವೇ? ಚಂಪಾರಣ್ ಯಾತ್ರೆ ಮಾಡಿದ ನೀವು ಮಹಾತ್ಮಾ ಗಾಂಧಿಯವರ ಹತ್ಯೆಗೆ ಸಂಚು ರೂಪಿಸಿದವರ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ, ನಿಮ್ಮ ಕ್ರಮ ಎಷ್ಟು ಸರಿ ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದರು.
ನಿತೀಶ್ ಕುಮಾರ್ ಅವರು ನನ್ನಲ್ಲಿ ರಾಜಿನಾಮೆ ನೀಡುವಂತೆ ಕೇಳಿರಲಿಲ್ಲ. ನಾನು ರಾಜಿನಾಮೆ ನೀಡಲು ಅವರು ಬಯಸುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಇದೆಲ್ಲವೂ ಪೂರ್ವ ನಿಯೋಜಿತ. ಅವರು ಮೈತ್ರಿಯನ್ನು ಮುರಿದು ಸರ್ಕಾರವನ್ನೇಕೆ ಉರುಳಿಸಿದರು ಎಂದು ತೇಜಸ್ವಿ ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com