ನಕಲಿ ನೋಟುಗಳ ಕಳ್ಳಸಾಗಣೆ: ಬಂಧಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ

ಬಾಂಗ್ಲಾದೇಶದಿಂದ 2,000 ಮುಖಬೆಲೆಯ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಭಾಗಿಯಾದ ಇಬ್ಬರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕೋಲ್ಕತ್ತಾ: ಬಾಂಗ್ಲಾದೇಶದಿಂದ 2,000 ಮುಖಬೆಲೆಯ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಭಾಗಿಯಾದ ಇಬ್ಬರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಕೋಲ್ಕತ್ತಾದ ನ್ಯಾಯಾಲಯದಲ್ಲಿ ಚಾರ್ಚ್ ಶೀಟ್ ಸಲ್ಲಿಸಿದೆ.
ಹಬೀಬುರ್ ರೆಹಮಾನ್ ಮತ್ತು ಫಕಿರುಲ್ ಎಸ್ ಕೆ ಅಲಿಯಾಸ್ ಆಕಾಶ್ ಎಂಬ ಇಬ್ಬರು ಮಾಲ್ಡಾದ ನಿವಾಸಿಗಳಾಗಿದ್ದು, ಇವರ ವಿರುದ್ಧ ನಕಲಿ ನೋಟುಗಳ ಕಳ್ಳಸಾಗಣೆ ಮತ್ತು ಚಲಾವಣೆ ಕೇಸು ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.
 ರಿಸರ್ವ್ ಬ್ಯಾಂಕ್ ಹೊರಡಿಸಿರುವ 2 ಸಾವಿರ ಮುಖಬೆಲೆಯ ಒಟ್ಟು 3.9 ಲಕ್ಷ ರೂಪಾಯಿಗಳ ನಕಲಿ ನೋಟುಗಳನ್ನು ಇವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಇಬ್ಬರು ಆರೋಪಿಗಳನ್ನು ತನಿಖೆ ನಂತರ ಬಂಧಿಸಿ ಆರೋಪ ಪಟ್ಟಿಯನ್ನು ನ್ಯಾಯಾಲಯದಲ್ಲಿ ಜೂನ್ 2ರಂದು ಸಲ್ಲಿಸಲಾಯಿತು ಎಂದು ತನಿಖಾ ದಳ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com