ಶಿವಪುರಿ (ಮಧ್ಯಪ್ರದೇಶ): ಕಳೆದ ವಾರ ಮಧ್ಯಪ್ರದೇಶದಲ್ಲಿ ನಡೆದಿದ್ದ ರೈತರ ಪ್ರತಿಭಟನೆ ವೇಳೆಯಲ್ಲಿ ಹಿಂಸೆಗೆ ಪ್ರಚೋದನೆ ಕೊಟ್ಟ ಆರೋಪದಲ್ಲಿ ಪೊಲೀಸರು ಕಾಂಗ್ರೆಸ್ ಶಾಸಕಿ ಶಕುಂತಲಾ ಖಾಟಿಕ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ರೈತರ ಪ್ರತಿಭಟನೆ ವೇಳೆಯಲ್ಲಿ ಪಕ್ಷದ ಕಾರ್ಯಕರ್ತರು ಹಿಂಸೆಯಲ್ಲಿ ತೊಡಗಿಸಿಕೊಳ್ಳಲು ಕರೆರ ಕಾಂಗ್ರೆಸ್ ಶಾಸಕ ಪ್ರಚೋದನೆ ನೀಡಿದ್ದರು ಎಂದು ಕರೆರ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಅನುರಾಗ್ ಖುಜರಿಯ ಹೇಳಿದ್ದಾರೆ.
ಪೋಲೀಸರ ಕ್ರಮಕ್ಕೆ ಕಾಂಗ್ರೆಸ್ ಶಾಸಕಿ ಮತ್ತು ಪಕ್ಷದ ಕಾರ್ಯಕರ್ತರು ಅಡ್ಡಿಪಡಿಸಿದ್ದರು ಎಂದು ಕೂಡ ಖುಜರಿಯ ಹೇಳಿದ್ದಾರೆ.
ಹಿಂಸೆಗೆ ಪ್ರಚೋದನೆ, ಪೊಲೀಸ್ ಕ್ರಮಕ್ಕೆ ಅಡ್ಡಿ, ಬೆದರಿಕೆ ಮತ್ತು ನಿಂದನೆಯ ಆರೋಪದ ಮೇಲೆ ಖಾಟಿಕ್ ಮತ್ತು ವಿಭಾಗೀಯ ಅಧ್ಯಕ್ಷ ಬೀನಾ ಗೋಯಲ್ ಹಾಗು ಇತರರ ಮೇಲೆ ಎಫ್ ಐ ಆರ್ ದಾಖಲಿಸಿರುವುದಾಗಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಿ ಮತ್ತು ಇದರಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ಎಲ್ಲ ಕ್ರಮ ತೆಗೆದುಕೊಳ್ಳುತ್ತಿರವುದಾಗಿ ಕೂಡ ಖುಜರಿಯ ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ಯಾರನ್ನು ಬಂಧಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.