ಭುವನೇಶ್ವರ್: ನನ್ನ ಮೇಲೆ ಮೊಟ್ಟೆ, ಟೊಮೆಟೊ ಎಸೆಯುವುದಾದರೆ ಜೊತೆಗೆ ಈರುಳ್ಳಿಯನ್ನು ಎಸೆಯಿರಿ ಅದರಿಂದ ನಾನು ಆಮ್ಲೆಟ್ ಮಾಡಿಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ವಿಪಕ್ಷದವರಿಗೆ ಮನವಿ ಮಾಡಿದ್ದಾರೆ.
ಎನ್ಡಿಎ ಸರ್ಕಾರದ ಕಾರ್ಯಕ್ರಮ ನಿಮಿತ್ತ ಒಡಿಶಾಕ್ಕೆ ತೆರಳಿದ ಸುಪ್ರಿಯೋ ಅವರು ಭುವನೇಶ್ವರದ ಬಿಜು ಅಂತಾರಾಷ್ಟ್ರೀಯ ವಿಮಾನದಲ್ಲಿ ಮಾತನಾಡಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಬಿಜೆಡಿ ಮತ್ತು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರಿಯೋ ಅವರು, ಒಡಿಶಾದಲ್ಲಿನ ರಾಜಕೀಯ ನೋಡಿದರೆ ಪಶ್ಚಿಮ ಬಂಗಾಳದ ರಾಜಕೀಯ ಹೆಚ್ಚು ಉತ್ತಮವಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಒಡಿಶಾದ ಬಡ ಜನತೆಗೆ ಮುಟ್ಟುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ಬದುಕುವಂತಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಬಾಬುಲ್ ಸುಪ್ರಿಯೋ ಅವರು ಎಲ್ಲಿಗೆ ಹೋದರು ಅವರ ಮೇಲೆ ಕಲ್ಲು ಅಥವಾ ಮೊಟ್ಟೆಯಿಂದ ಹೊಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರಿಯೋ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.