ಡಾರ್ಜಿಲಿಂಗ್ ಕಣಿವೆಯಲ್ಲಿ ಮುಂದುವರಿದ ಅನಿರ್ದಿಷ್ಟಾವಧಿ ಬಂದ್

ಪ್ರತ್ಯೇಕ ಗೋರ್ಖಾ ರಾಜ್ಯಕ್ಕಾಗಿ ಡಾರ್ಜಿಲಿಂಗ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಬಂದ್ ಏಳನೆ ದಿನವಾದ...
ಬಂದ್ ನಲ್ಲಿ ಭಾಗವಹಿಸಿರುವ ಜಿಜೆಎಂ ಕಾರ್ಯಕರ್ತರು
ಬಂದ್ ನಲ್ಲಿ ಭಾಗವಹಿಸಿರುವ ಜಿಜೆಎಂ ಕಾರ್ಯಕರ್ತರು
Updated on
ಡಾರ್ಜಿಲಿಂಗ್: ಪ್ರತ್ಯೇಕ ಗೋರ್ಖಾ ರಾಜ್ಯಕ್ಕಾಗಿ ಡಾರ್ಜಿಲಿಂಗ್ ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಬಂದ್ ಏಳನೆ ದಿನವಾದ ಬುಧವಾರವೂ ಮುಂದುವರೆದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.
ಜಿಜೆಎಂ ಬೆಂಬಲಿತ ಬಂದ್ ಇಂದು ಸಹ ಮುಂದುವರೆದಿದ್ದು, ಡಾರ್ಜಿಲಿಂಗ್ ಕಣಿವೆಯಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಡಾರ್ಜಿಲಿಂಗ್ ನಲ್ಲಿ ಪೊಲೀಸರು ಮತ್ತು ಅರೆಸೇನಾಪಡೆ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಅಂಗಡಿ ಮುಂಗಟ್ಟಗಳು ಸಂಪೂರ್ಣ ಬಂದ್ ಆಗಿವೆ.
ನಿನ್ನೆಯಷ್ಟೇ ಸರ್ವಪಕ್ಷ ಸಭೆ ಕರೆದಿದ್ದ ಗೋರ್ಖಾ ಜನಮುಕ್ತಿ ಮೋರ್ಚಾ ಪ್ರತ್ಯೇಕ ರಾಜ್ಯಕ್ಕಾಗಿ ಅನಿರ್ಧಾಷ್ಟಾವಧಿ ಬಂದ್ ಮುಂದುವರೆಸುವ ನಿರ್ಣಯ ಕೈಗೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com