ಕೇರಳದಲ್ಲಿ ರಾಷ್ಟ್ರಪತಿ ಆಡಳಿತ ಹೇರಿ: ಆರ್'ಎಸ್ಎಸ್ ಆಗ್ರಹ

ಕೇರಳ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅರಾಜಕತೆ ಸ್ಥಿತಿಯತ್ತ ತಲುಪಿದ್ದು, ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್'ಎಸ್ಎಸ್) ಭಾನುವಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ನವದೆಹಲಿ: ಕೇರಳ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅರಾಜಕತೆ ಸ್ಥಿತಿಯತ್ತ ತಲುಪಿದ್ದು, ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್'ಎಸ್ಎಸ್) ಭಾನುವಾರ ಆಗ್ರಹಿಸಿದೆ. 
ಈ ಕುರಿತಂತೆ ಮಾತನಾಡಿರುವ ಆರ್'ಎಸ್ಎಸ್ ನಾಯಕ ರಾಕೇಶ್ ಸಿನ್ಹಾ ಅವರು, ಕೇರಳ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಅರಾಜಕತೆಯ ಸ್ಥಿತಿಯತ್ತ ತಲುಪಿದೆ. ಕೇಂದ್ರ ಮಧ್ಯಪ್ರವೇಶ ಮಾಡಲು ಇದು ಸೂಕ್ತ ರೀತಿಯ ಸಮಯವಾಗಿದೆ ಎಂದು ಹೇಳಿದ್ದಾರೆ. 
ಹಿಂಸಾಚಾರ ಹಾಗೂ ಆರ್'ಎಸ್ಎಸ್ ಕಾರ್ಯಕರ್ತರನ್ನು ಹತ್ಯೆ ಮಾಡುವುದು ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಸಿಪಿಐ(ಎಂ) ಕಾರ್ಯಕರ್ತರು ಆರ್'ಎಸ್ಎಸ್ ಕಾರ್ಯಕರ್ತರಿಗೆ ಪ್ರಚೋದನೆಯನ್ನು ನೀಡುತ್ತಿದ್ದು, ನಾಗರೀಕ ಯುದ್ಧವನ್ನು ಆಹ್ವಾನಿಸುತ್ತಿದ್ದಾರೆ. ಕೇರಳದಲ್ಲಿ ಪರಿಸ್ಥಿತಿ ಅರಾಜಕತೆಯತ್ತ ತಲುಪಿದ್ದು, ಕೂಡಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಅಗತ್ಯವಿದೆ ಎಂದು ತಿಳಿದಿದ್ದಾರೆ. 
ಇದೇ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಆರೋಪ ವ್ಯಕ್ತಪಡಿಸಿರುವ ಅವರು, ಆರ್'ಎಸ್ಎಸ್ ಕಾರ್ಯಕರ್ತರ ಹತ್ಯೆಗೆ ರಾಜ್ಯ ಮುಖ್ಯಮಂತ್ರಿಗಳೇ ಕಾರಣರಾಗಿದ್ದಾರೆ. ಅವರೇ ಪ್ರಮುಖ ಆರೋಪಿಯಾಗಿದ್ದಾರೆ. ಈ ವಿಚಾರದಲ್ಲಿ ಬೇರೆ ಯಾರನ್ನೂ ನಾವು ದೂಷಿಸುವುದಿಲ್ಲ. ಕೇರಳದಲ್ಲಿ ಹಿಂಸಾಚಾರ ಸೃಷ್ಟಿಗೆ ಸಿಪಿಐ(ಎಂ) ಕಾರಣವಾಗಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com